ಕಾರ್ಗಿಲ್ ನಲ್ಲಿ 4.2 ತೀವ್ರತೆಯ ಭೂಕಂಪ: ಯಾವುದೇ ಸಾವುನೋವುಗಳಿಲ್ಲ

ಲೇಹ್/ಜಮ್ಮು,ನ.22: ಲಡಾಖ್ ನ ಕಾರ್ಗಿಲ್ ಜಿಲ್ಲೆಯಲ್ಲಿ ಮಂಗಳವಾರ 4.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರಿಯ ಭೂಕಂಪಶಾಸ್ತ್ರ ಕೇಂದ್ರವು ತಿಳಿಸಿದೆ.
ಭೂಕಂಪದಿಂದಾಗಿ ಯಾವುದೇ ಸಾವುನೋವುಗಳು ಅಥವಾ ಆಸ್ತಿಹಾನಿ ವರದಿಯಾಗಿಲ್ಲ.
ಬೆಳಿಗ್ಗೆ 10:05ಕ್ಕೆ ಸಂಭವಿಸಿದ ಭೂಕಂಪದ ಕೇಂದ್ರಬಿಂದು ಕಾರ್ಗಿಲ್ನಿಂದ ಉತ್ತರಕ್ಕೆ 191 ಕಿ.ಮೀ.ಅಂತರದಲ್ಲಿತ್ತು. ಭೂಕಂಪ 10 ಕಿ.ಮೀ.ಆಳದಲ್ಲಿ ಸಂಭವಿಸಿತ್ತು ಎಂದು ತಿಳಿಸಿದೆ.
Next Story





