ದ.ಕ ಜಿಲ್ಲಾ ಬಿಜೆಪಿಯಿಂದ ಮೋದಿ@20 ಪುಸ್ತಕ ಬಿಡುಗಡೆ ಮತ್ತು ಸಂವಾದ

ಮಂಗಳೂರು, ನ.22; ನರೇಂದ್ರ ಮೋದಿಯವರ 20ವರ್ಷಗಳ ಸಾರ್ವಜನಿಕ ಜೀವನ, ಸಾಧನೆ, ರಾಷ್ಟ್ರ ನಿರ್ಮಾಣದ ಚಿಂತನೆಗಳು ಮೋದಿ@20 ಪುಸ್ತಕದಲ್ಲಿ ಒಳಗೊಂಡಿದೆ ಎಂದು ಮಾಜಿ ಶಾಸಕ ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.
ಅವರು ಇಂದು ನಗರದ ಡೊಂಗರಕೇರಿ ಭುವನೇಂದ್ರ ಸಭಾಭವನದಲ್ಲಿ ದ.ಕ ಜಿಲ್ಲಾ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ 'ಮೋದಿ @20' ಪುಸ್ತಕ ವನ್ನು ಮಂಗಳೂರಿನಲ್ಲಿ ಬಿಡುಗಡೆ ಮತ್ತು ಸಂವಾದ ಸಮಾರಂಭದ ಮುಖ್ಯ ಅತಿಯಾಗಿ ಮಾತನಾಡುತ್ತಿದ್ದರು.
ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡಬಿದಿರೆ ಸಮಾರಂಭದಲ್ಲಿ ಅಧ್ಯಕ್ಷ ತೆ ವಹಿಸಿದ್ದರು. ಸಮಾರಂಭದಲ್ಲಿ ಬಿಜೆಪಿ ವಿವಿಧ ಘಟಕದ ಪದಾಧಿಕಾರಿಗಳಾದ ಸಿ.ಎ. ಶಾಂತಾರಾಮ ಶೆಟ್ಟಿ, ಮೋಹನ್ ಶೆಟ್ಟಿ, ಭಾರತಿ ಪ್ರಭು ಮೊದಲಾದವರು ಉಪಸ್ಥಿತರಿದ್ದರು. ಸಂಜ ಪ್ರಭು ಕಾರ್ಯಕ್ರಮ ನಿರೂಪಿಸಿದರು.