ಫಿಫಾ ವಿಶ್ವಕಪ್: ಮೆಕ್ಸಿಕೊ-ಪೋಲಂಡ್ ನಡುವಿನ ಪಂದ್ಯ ಡ್ರಾ

ದೋಹಾ: ಫಿಫಾ ವಿಶ್ವಕಪ್ ಸಿ ವಿಭಾಗದ ಮೆಕ್ಸಿಕೊ ಮತ್ತು ಪೋಲಂಡ್ ತಂಡಗಳ ನಡುವೆ ನಡೆದ ಫುಟ್ಬಾಲ್ ಪಂದ್ಯಾಟವು ಸಮಬಲದಲ್ಲಿ ಅಂತ್ಯಗೊಂಡಿದೆ. ಇತ್ತಂಡಗಳೂ ಗೋಲ್ ಗಳಿಸದ ಕಾರಣ ಪಂದ್ಯಾಟ ಡ್ರಾ ಆಗಿದೆ.
ಬುಧವಾರದಂದು ಫ್ರಾನ್ಸ್-ಆಸ್ಟ್ರೇಲಿಯಾ, ಮೊರೊಕ್ಕೊ-ಕ್ರೊವೇಷಿಯಾ, ಜರ್ಮನಿ-ಜಪಾನ್ ಹಾಗೂ ಸ್ಪೇನ್ ಮತ್ತು ಕೋಸ್ಟರಿಕಾ ಸೆಣಸಾಡಲಿವೆ.
Next Story