ಫಿಫಾ ವಿಶ್ವಕಪ್: ಹಾಲಿ ಚಾಂಪಿಯನ್ ಫ್ರಾನ್ಸ್‌ಗೆ ಭರ್ಜರಿ ಜಯ

ಹೊಸದಿಲ್ಲಿ: ದಾಖಲೆಗಳ ಸರದಾರ ಒಲಿವೀರ್ ಗಿರೋಡ್ (Olivier Giroud) ಎರಡು ಗೋಲುಗಳನ್ನು ಹೊಡೆಯುವ ಮೂಲಕ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡ ಫಿಫಾ ವಿಶ್ವಕಪ್‍ನಲ್ಲಿ ಆಸ್ಟ್ರೇಲಿಯಾ ವಿರುದ್ಧ 4-1 ಗೋಲುಗಳ ಭರ್ಜರಿ ಜಯದೊಂದಿಗೆ ವಿಶ್ವಕಪ್ ಅಭಿಯಾನ ಮುಂದುವರಿಸಿದೆ.
ಜನೋಬ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ 36 ವರ್ಷ 53 ದಿನಗಳ ಗಿರೋಡ್, ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಆಡಿದ ಫ್ರಾನ್ಸ್‌ನ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಂತೆಯೇ ದೇಶದಲ್ಲಿ ವಿಶ್ವಕಪ್‍ನಲ್ಲಿ ಗರಿಷ್ಠ ಗೋಲು ಸಾಧಿಸಿದ ತೀರಿ ಹೆನ್ರಿ ಅವರ 51 ಗೋಲುಗಳ ದಾಖಲೆಯನ್ನು ಸರಿಗಟ್ಟುವ ಮೂಲಕ ಇದನ್ನು ಸ್ಮರಣೀಯವಾಗಿಸಿದರು.
ಪಂದ್ಯ ಆರಂಭದ 9ನೇ ನಿಮಿಷದಲ್ಲೇ ಕ್ರೆಗ್ ಗುಡ್‍ವಿನ್ ಆಸ್ಟ್ರೇಲಿಯಾಗೆ ಆರಂಭಿಕ ಮುನ್ನಡೆ ಗಳಿಸಿಕೊಟ್ಟರು. ಆದರೆ ವಿರಾಮಕ್ಕೆ ಮುನ್ನ ಹಾಗೂ ವಿರಾಮದ ಬಳಿಕ ಎರಡು ಗೋಲುಗಳನ್ನು ಸಿಡಿಸಿದ ಗಿರೋಡ್, ತಂಡದ ಮುನ್ನಡೆಗೆ ಕಾರಣರಾದರು. ಇದಕ್ಕೂ ಮುನ್ನ ಆಡ್ರಿಯನ್ ರಬಿಯೋಟ್ ಗೋಲು ಗಳಿಸಿ ಸಮಬಲಕ್ಕೆ ಕಾರಣರಾಗಿದ್ದರು.
ಇಂದಿನ ಜಯದೊಂದಿಗೆ 2006ರಲ್ಲಿ ಚಾಂಪಿಯನ್ ತಂಡವಾಗಿದ್ದ ಬ್ರೆಝಿಲ್ ಆರಂಭಿಕ ಪಂದ್ಯ ಗೆದ್ದ ಬಳಿಕ ಆರಂಭಿಕ ಪಂದ್ಯವನ್ನು ಹಾಲಿ ಚಾಂಪಿಯನ್ನರು ಗೆಲ್ಲುತ್ತಿರುವುದು ಇದೇ ಮೊದಲು. 2010ರಲ್ಲಿ ಇಟಲಿ, 2014ರಲ್ಲಿ ಸ್ಪೇನ್ ಮತ್ತು 2018ರಲ್ಲಿ ಜರ್ಮನಿ ಈ ಸಾಧನೆ ಮಾಡಲು ವಿಫಲವಾಗಿದ್ದವು.
ರಕ್ಷಣಾ ಆಟಗಾರ ಲೂಕಾಸ್ ಹೆರ್ನಂಡೆಜ್ ಅವರನ್ನು ಮೊಣಕಾಲು ಗಾಯದ ಕಾರಣದಿಂದ ಕಳೆದುಕೊಂಡರೂ ಅಂಕಪಟ್ಟಿಯಲ್ಲಿ ಮೂರು ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿ ಪ್ರಶಸ್ತಿ ಅಭಿಯಾನ ಆರಂಭಿಸಿತು. ಗುಂಪಿನಲ್ಲಿ ಮೊದಲ ಪಂದ್ಯ ಡ್ರಾ ಮಾಡಿಕೊಂಡ ಟ್ಯೂನೇಶಿಯಾ ಹಾಗೂ ಡೆನ್ಮಾರ್ಕ್ ನಂತರದ ಸ್ಥಾನಗಳಲ್ಲಿವೆ. ಈ ಬಗ್ಗೆ timesofindia.com ವರದಿ ಮಾಡಿದೆ.
The reigning champs are up and running @adidasfootball | #FIFAWorldCup
— FIFA World Cup (@FIFAWorldCup) November 22, 2022
Champions Curse... What Champions Curse? @KMbappe | #FIFAWorldCup pic.twitter.com/80ccAqLk6P
— FIFA World Cup (@FIFAWorldCup) November 22, 2022