ನ.26ಕ್ಕೆ ಸಿಂಸಾರುಲ್ ಹಖ್ ಹುದವಿ ಕೊಡಾಜೆಗೆ

ಬಂಟ್ವಾಳ, ನ.23: ಮಾಣಿ ಸಮೀಪದ ಕೊಡಾಜೆ ಬದ್ರಿಯ ಜುಮಾ ಮಸೀದಿಯ ವತಿಯಿಂದ ನ. 25 ಮತ್ತು 26 ರಂದು ಧಾರ್ಮಿಕ ಪ್ರವಚನ ಕಾರ್ಯಕ್ರಮವು ಕೊಡಾಜೆ ತರ್ಬಿಯತುಲ್ ಇಸ್ಲಾಂ ಮದ್ರಸ ವಠಾರದ ಮರ್ಹೂಂ ಮುಹಮ್ಮದ್ ಹಾಜಿ ನಗರದ ಮರ್ಹೂಂ ಸುಲ್ತಾನ್ ಹಾಜಿ ವೇದಿಕೆಯಲ್ಲಿ ಜರುಗಲಿದೆ ಎಂದು ಬದ್ರಿಯಾ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ನವಾಝ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನ.25ರಂದು ಸಂಜೆ 7ಕ್ಕೆ ಕಾರ್ಯಕ್ರಮವನ್ನು ಉಡುಪಿ, ಚಿಕ್ಕಮಗಳೂರು ಖಾಝಿ ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್ ಉದ್ಘಾಟಿಸುವರು. ಕಾರ್ಯಕ್ರಮದ ಸ್ವಾಗತ ಸಮಿತಿಯ ಅಧ್ಯಕ್ಷ ಉಮರ್ ಹಾಜಿ ರಾಜ್ ಕಮಲ್ ಅಧ್ಯಕ್ಷತೆ ವಹಿಸುವರು. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯ ಉಸ್ಮಾನುಲ್ ಫೈಝಿ ತೋಡಾರ್ ಮುಖ್ಯ ಅತಿಥಿಯಾಗಿ ಬಾಗವಹಿಸುವರು. ಕೊಡಾಜೆ ಬದ್ರಿಯಾ ಜುಮಾ ಮಸೀದಿ ಖತೀಬರಾದ ಅಬೂ ಉಮೈರ ಅಬ್ದುಲ್ ಅಝೀಝ್ ದಾರಿಮಿ ಪೊನ್ಮಳ ಮುಖ್ಯ ಭಾಷಣಗೈಯುವರು ಎಂದರು.
ನ.26 ರಂದು ಅಂತಾರಾಷ್ಟ್ರೀಯ ವಾಗ್ಮಿ ಸಿಂಸಾರುಲ್ ಹಖ್ ಹುದವಿ ಅಬುಧಾಬಿ ಮುಖ್ಯ ಭಾಷಣಗೈಯಲಿದ್ದು, ಬದ್ರಿಯಾ ಜುಮಾ ಮಸೀದಿಯ ಗೌರಾವಾಧ್ಯಕ್ಷ ಸೈಯದ್ ಕೆ.ಎಸ್. ಅಲಿ ತಂಙಳ್ ಕುಂಬೋಳ್ ದುಆ ನೆರವೇರಿಸುವವರು. ಮಸೀದಿ ಅಧ್ಯಕ್ಷ ಹಾಜಿ ಇಬ್ರಾಹೀಂ ರಾಜ್ ಕಮಲ್ ಅದ್ಯಕ್ಷತೆ ವಹಿಸುವರು. ಸ್ಥಳೀಯ ಮಸೀದಿ ಮಾಜಿ ಖತೀಬ್ ಹಾಜಿ ಪಿ.ಕೆ.ಆದಂ ದಾರಿಮಿ ಸಹಿತ ಹಲವಾರು ಧಾರ್ಮಿಕ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದವರು ವಿವರಿಸಿದರು
ಸುದ್ದಿಗೋಷ್ಠಿಯಲ್ಲಿ ಕೊಡಾಜೆ ಬದ್ರಿಯ ಜುಮಾ ಮಸೀದಿಯ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಪೊನ್ಮಳ, ಅಧ್ಯಕ್ಷ ಹಾಜಿ ಇಬ್ರಾಹೀಂ ರಾಜ್ ಕಮಲ್, ಕೋಶಾಧೀಕಾರಿ ಹಾಜಿ ಬಿ.ಮುಹಮ್ಮದ್ ರಪೀಕ್ ಸುಲ್ತಾನ್, ಸ್ವಾಗತ ಸಮಿತಿಯ ಅಧ್ಯಕ್ಷ ಉಮರ್ ಹಾಜಿ ರಾಜ್ ಕಮಲ್, ಕನ್ವೀನರ್ ಹನೀಫ್ ಖಾನ್ ಕೊಡಾಜೆ, ಸದಸ್ಯರಾದ ರಹೀಂ ಸುಲ್ತಾನ್, ಹಾಗೂ ಇಂಜಿನಿಯರ್ ನವಾಝ್ ಉಪಸ್ಥಿತರಿದ್ದರು.