ಶಿರೂರು ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿ-ಪೋಷಕರಿಗೆ ಶೈಕ್ಷಣಿಕ ಪ್ರೇರಣಾ ಶಿಬಿರ

ಶಿರೂರು, ನ.23: ಇಲ್ಲಿನ ಹಡವಿನಕೋಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಮ್ಮ ನಾಡ ಒಕ್ಕೂಟದ ಬೈಂದೂರು ಘಟಕದ ಸಹಯೋಗದಲ್ಲಿ ವಿದ್ಯಾರ್ಥಿ-ಪೋಷಕರಿಗೆ ಪ್ರೇರಣಾ ಶಿಬಿರವನ್ನು ಸೋಮವಾರ ಆಯೋಜಿಸಲಾಗಿತ್ತು.
ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಕಚ್ಚಿ ಮುಹಮ್ಮದ್ ಮುಶ್ತಾಕ್ ಅಧ್ಯಕ್ಷತೆಯಲ್ಲಿ ನಡೆದ ಶಿಬಿರವನ್ನು ಶಿರೂರು ಗ್ರಾ.ಪಂ. ಸದಸ್ಯ ನೂರ್ ಮುಹಮ್ಮದ್ ಉದ್ಘಾಟಿಸಿದರು. ನಮ್ಮ ನಾಡ ಒಕ್ಕೂಟ ಬೈಂದೂರು ಘಟಕದ ಉಪಾಧ್ಯಕ್ಷ ಮಾಮ್ಡು ಇಬ್ರಾಹೀಂ ಸಾಹೇಬ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮಂಗಳೂರಿನ ರಫೀಕ್ ಮಾಸ್ಟರ್ ಶಿಬಿರ ನಡೆಸಿಕೊಟ್ಟರು.
ಮುಖ್ಯ ಅತಿಥಿಗಳಾಗಿ ಶಿರೂರು ಗ್ರಾಪಂ ಸದಸ್ಯರುಗಳಾದ ಖಲೀಫಾ ಶಾಹೀನ್, ತಾರಿಸಲ್ಲಾ ಮುಹಮ್ಮದ್ ಗೌಸ್, ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಖಜಾಂಚಿ ಸಯ್ಯದ್ ಅಜ್ಮಲ್ ಸಾಹೇಬ್, ಸದಸ್ಯರಾದ ಪರಿ ಹುಸೈನ್ ಸಾಹೇಬ್, ತಾಲೂಕು ಸದಸ್ಯರಾದ ಇಲ್ಯಾಸ್ ಸಾಹೇಬ್ ಬೈಂದೂರು, ನಿವೃತ್ತ ಮುಖ್ಯೊಪಾಧ್ಯಾಯ ಕಾಪ್ಸಿ ಮುಹಮ್ಮದ್ ಗೌಸ್, ಹಡವಿನಕೋಣೆ ಗಣೇಶ್ ಸೇವಾ ಸಂಘದ ಕಾರ್ಯದರ್ಶಿ ವೆಂಕಪ್ಪ ಮೇಸ್ತ, ಎಸ್.ಡಿ.ಎಂ.ಸಿ. ಸದಸ್ಯರು, ಶಾಲಾ ಶಿಕ್ಷಕ ವೃಂದದವರು, ಪೋಷಕರು ಮತ್ತು ಶಿಕ್ಷಣಾಭಿಮಾನಿಗಳು ಉಪಸ್ಥಿತರಿದ್ದರು.
ಶಾಲೆಯ ಮುಖ್ಯೊಪಾಧ್ಯಾಯ ಎಸ್.ಆನಂದ ಮೊಗವೀರ ಸ್ವಾಗತಿಸಿದರು. ಶಿಕ್ಷಕ ಧರ್ಮನಾಯಕ್ ಕಾರ್ಯಕ್ರಮವನ್ನು ನಿರೂಪಿಸಿದರು. ಅಧ್ಯಾಪಕಿ ಪೂರ್ಣಿಮಾ ವಂದಿಸಿದರು.









