ಹುಬ್ಬಳ್ಳಿ | ಮಂಗಳೂರು ಸ್ಫೊಟ ಹಿನ್ನೆಲೆ: ನಂಬರ್ ಪ್ಲೇಟ್, ದಾಖಲೆಗಳಿಲ್ಲದ 45 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳ ಜಪ್ತಿ
![ಹುಬ್ಬಳ್ಳಿ | ಮಂಗಳೂರು ಸ್ಫೊಟ ಹಿನ್ನೆಲೆ: ನಂಬರ್ ಪ್ಲೇಟ್, ದಾಖಲೆಗಳಿಲ್ಲದ 45 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳ ಜಪ್ತಿ ಹುಬ್ಬಳ್ಳಿ | ಮಂಗಳೂರು ಸ್ಫೊಟ ಹಿನ್ನೆಲೆ: ನಂಬರ್ ಪ್ಲೇಟ್, ದಾಖಲೆಗಳಿಲ್ಲದ 45 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳ ಜಪ್ತಿ](https://www.varthabharati.in/sites/default/files/images/articles/2022/11/23/357405-1669189098.jpg)
ಹುಬ್ಬಳ್ಳಿ,ನ.23: ದಾಖಲೆಗಳಿಲ್ಲದ ಹಾಗೂ ನಂಬರ್ ಪ್ಲೇಟ್ ಇಲ್ಲದೇ ಸಂಚರಿಸುತ್ತಿದ್ದ ವಾಹನಗಳ ವಿರುದ್ಧ ಕಾರ್ಯಾಚರಣೆ ಚುರುಕುಗೊಳಿಸಿರುವ ಪೊಲೀಸರು, ಕಸಬಾಪೇಟೆ ಮತ್ತು ಹಳೇ ಹುಬ್ಬಳ್ಳಿ ಣೆ ವ್ಯಾಪ್ತಿಯಲ್ಲಿ 45ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ನಗರದ ಪೊಲೀಸರು ಹೈ ಆಲರ್ಟ್ ಆಗಿದ್ದಾರೆ. ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಗೋಪಾಲ ಬ್ಯಾಕೋಡ ನೇತೃತ್ವದಲ್ಲಿ ಪೊಲೀಸರು ವಿವಿಧ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.
ದ್ವಿಚಕ್ರ ವಾಹನಗಳಲ್ಲಿ ನಂಬರ್ ಪ್ಲೇಟ್ ಅಷ್ಟೇ ಅಲ್ಲದೆ, ವಾಹನಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳಿಲ್ಲದೇ ಅನುಮಾನಸ್ಪದವಾಗಿದ್ದವು. ಹಾಗಾಗಿ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು | ಆಟೊ ರಿಕ್ಷಾದಲ್ಲಿ ಸ್ಫೋಟ ಪ್ರಕರಣ: ಸ್ಥಳಕ್ಕೆ ಗೃಹಸಚಿವರು ಭೇಟಿ, ಪರಿಶೀಲನೆ
Next Story