ಮರ್ಕಝುಲ್ ಹುದಾ ‘ಗಲ್ಫ್ ಕೌನ್ಸಿಲ್’ ಸಂಚಾಲಕರಾಗಿ ಬಶೀರ್ ಇಂದ್ರಾಜೆ ಆಯ್ಕೆ

ಪುತ್ತೂರು, ನ.23: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಅಭಿವೃದ್ಧಿಗಾಗಿ ಕಾರ್ಯಾಚರಿಸುವ ವಿವಿಧ ಗಲ್ಫ್ ಘಟಕಗಳನ್ನು ಸಮನ್ವಯಗೊಳಿಸುವ ನಿಟ್ಟಿನಲ್ಲಿ ‘ಮರ್ಕಝುಲ್ ಹುದಾ ಗಲ್ಫ್ ಕೌನ್ಸಿಲ್’ನ ಸಂಚಾಲಕರಾಗಿ ಬಶೀರ್ ಇಂದ್ರಾಜೆ ಆಯ್ಕೆಯಾಗಿದ್ದಾರೆ.
ಸುದೀರ್ಘ ಕಾಲ ಸಂಸ್ಥೆಯ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ ಕಾಲೇಜಿನ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಬಶೀರ್ ನೇತೃತ್ವ ನೀಡಿರುವರು.
ಸೌದಿ ಅರೇಬಿಯಾ, ಯುಎಇ, ಬಹರೈನ್, ಒಮಾನ್, ಖತರ್, ಕುವೈತ್ ಮುಂತಾದ ರಾಷ್ಟ್ರಗಳ ಮರ್ಕಝುಲ್ ಹುದಾ ಪೋಷಕ ಘಟಕಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಜುಬೈಲ್ನಲ್ಲಿ ನಡೆದ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಸಮಾವೇಶದಲ್ಲಿ ಕೇಂದ್ರ ಸಮಿತಿಯ ಉಪಾಧ್ಯಕ್ಷ ಡಾ.ಎಮ್ಮೆಸ್ಸೆಂ ಝೈನಿ ಕಾಮಿಲ್ ಈ ಆಯ್ಕೆಯನ್ನು ಘೋಷಿಸಿದ್ದಾರೆ.
Next Story