ಫಿಫಾ ವಿಶ್ವಕಪ್: ಮೊರೊಕ್ಕೊ-ಕ್ರೊಯೇಶಿಯ ಪಂದ್ಯ ಗೋಲು ರಹಿತ ಡ್ರಾ

ದೋಹಾ, ನ.23: ಮೊರೊಕ್ಕೊ ಹಾಗೂ ಕ್ರೊಯೇಶಿಯಾ ನಡುವೆ ಬುಧವಾರ ನಡೆದ ಫಿಫಾ ವಿಶ್ವಕಪ್-2022ರ ಎಫ್ ಗುಂಪಿನ ಪಂದ್ಯ ಗೋಲುರಹಿತ ಡ್ರಾನಲ್ಲಿ ಕೊನೆಗೊಂಡಿದೆ.
ಅಲ್‌ಬೈತ್ ಸ್ಟೇಡಿಯಮ್‌ನಲ್ಲಿ ನಡೆದ ಹಣಾಹಣಿಯಲ್ಲಿ ಉಭಯ ತಂಡಗಳು ಸಮಬಲದ ಹೋರಾಟ ನೀಡಿದವು. ನಿಗದಿತ 90 ನಿಮಿಷಗಳ ಆಟದಲ್ಲಿ ಎರಡೂ ತಂಡಗಳು ಗೋಲು ಗಳಿಸಲು ವಿಫಲವಾದವು.
ಮೊದಲಾವಧಿಯಲ್ಲಿ ಎರಡೂ ತಂಡಗಳು ಗೋಲುಗಳಿಸುವ ಅವಕಾಶ ಪಡೆದಿದ್ದವು. ಆದರೆ ಅದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಎಡವಿದವು.
ಕ್ರೊಯೇಶಿಯ 16 ತಿಂಗಳಲ್ಲಿ 5 ಪಂದ್ಯಗಳಲ್ಲಿ ಜಯ ಸಾಧಿಸಿದ್ದು,ಒಮ್ಮೆ ಮಾತ್ರ ಸೋಲುಂಡಿದೆ. 2018ರ ರನ್ನರ್ಸ್ ಅಪ್ ಕ್ರೊಯೇಶಿಯಕ್ಕೆ ಮಿಡ್‌ಫೀಲ್ಡರ್ ಲುಕಾ ಮೊಡ್ರಿಕ್ ನೇತೃತ್ವವಹಿಸಿದ್ದಾರೆ.
Next Story





