ಗ್ಲ್ಯಾನಿಶ್ ಜೂಡ್‌ಗೆ ದಿ.ಜೋಸೆಫ್, ಮೇರಿ ಪಿಂಟೊ ನಿಡ್ಡೋಡಿ ಸ್ಮಾರಕ ಪುರಸ್ಕಾರ

ಉಡುಪಿ : ಕೊಂಕಣಿಯಲ್ಲಿ ಬರೆಯುವ ಯುವ ಸಾಹಿತಿಗಳಿಗೆ ಕಥೊಲಿಕ್ ಸಭಾ ಉಡುಪಿ ಪ್ರದೇಶ ಇವರ ಸಹ ಭಾಗಿತ್ವದಲ್ಲಿ ನೀಡುವ ದಿವಂಗತ ಜೋಸೆಪ್ ಆನಿ ಮೇರಿ ಪಿಂಟೊ ನಿಡ್ಡೋಡಿ ಸ್ಮಾರಕ ಸಾಹಿತ್ಯ ಪುರಸ್ಕಾರ-2022ಕ್ಕೆ ಯುವ ಲೇಖಕ ಗ್ಲ್ಯಾನಿಶ್ ಜೂಡ್ ಮಾರ್ಟಿಸ್ ಅಲಂಗಾರು ಅವರನ್ನು ಆಯ್ಕೆ ಮಾಡಲಾಗಿದೆ
ಕಳೆದ 7 ವರ್ಷಗಳಿಂದ ಕೊಂಕಣಿ ಪತ್ರಿಕೆಗಳಲ್ಲಿ ಹಾಗೂ ಅಂತರ್ ಜಾಲ ಮಾಧ್ಯಮದಲ್ಲಿ ಇವರ ಕಥೆಗಳು, ಕವನಗಳು ಲೇಖನಗಳು ಪ್ರಕಟಗೊಂಡಿವೆ. ಹಲವಾರು ಕಥೆ, ಕವನ ಹಾಗೂ ಲೇಖನ ಸ್ಪರ್ಧೆಗಳಲ್ಲಿ ಇವರು ಬಹುಮಾನ ಪಡೆದಿದ್ದಾರೆ.
2021ರಲ್ಲಿ ಬಿ.ಎಸ್ಸಿ(ಬಯೋಟೆಕ್ನೋಜಿ) ಮಂಗಳೂರು ವಿಶ್ವವಿದ್ಯಾನಿಲಯ ದಿಂದ ಚಿನ್ನದ ಪದಕವನ್ನು ಗಳಿಸಿ, ಪ್ರಸ್ತುತ, ಮೂಡಬಿದ್ರಿ ಅಳ್ವಾಸ್ ಕಾಲೇಜಿನಲ್ಲಿ ಎಂಎಸ್ಸಿ(ಬಯೋಟೆಕ್ನೋಜಿ) ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಪುರಸ್ಕಾರವನ್ನು ಡಿ.4 ರಂದು ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ಕಥೊಲಿಕ್ ಸಭಾ, ಕೊಂಕಣಿ ಲೇಖಕರ ಸಂಘ-ಕರ್ನಾಟಕ ಇವರು ಆಯೋಜಿಸಿದ ಲೇಖಕರ ಸಮಾವೇಶದಲ್ಲಿ ನೀಡಲಾಗುವುದು ಎಂದು ಪುರಸ್ಕಾರ ಸಮಿತಿಯ ಸಂಯೋಜಕ ಡಾ.ಜೆರಾಲ್ಡ್ ಪಿಂಟೊ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







