ಮಂಗಳೂರು: ‘ಸಿಟಿಗೋಲ್ಡ್’ನಲ್ಲಿ ರಕ್ತದಾನ ಶಿಬಿರ

ಮಂಗಳೂರು, ನ.23: ನಗರದ ಕಂಕನಾಡಿಯಲ್ಲಿರುವ ‘ಸಿಟಿಗೋಲ್ಡ್’ ವತಿಯಿಂದ ಮಂಗಳೂರು ಶಾಖೆಯು ಸಿಬ್ಬಂದಿ ಹಾಗೂ ಗ್ರಾಹಕರು ಮತ್ತು ಸಾರ್ವಜನಿಕರಿಂದ ಸಿಟಿಗೋಲ್ಡ್‌ನ 8ನೇ ವಾರ್ಷಿಕೋತ್ಸವದ ಪ್ರಯುಕ್ತ ಕಂಕನಾಡಿಯ ಮಳಿಗೆಯಲ್ಲಿ ಬುಧವಾರ ರಕ್ತದಾನ ಶಿಬಿರ ನಡೆಯಿತು.
ಮುಖ್ಯ ಅತಿಥಿಗಳಾಗಿ ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್‌ನ ಸ್ಥಾಪಕ ರವೂಫ್ ಬಂದರ್, ಬಿರುವೆರ್ ಕುಡ್ಲದ ಸ್ಥಾಪಕ ಉದಯ್ ಪೂಜಾರಿ, ಬ್ಲಡ್ ಹೆಲ್ಪ್‌ಕೇರ್ ಕರ್ನಾಟಕ ಇದರ ಅಧ್ಯಕ್ಷ ನಝೀರ್ ಹುಸೈನ್, ವಾಯ್ಸ್ ಆಫ್ ವಿಮೆನ್ಸ್ ವಿಂಗ್‌ನ ಅಲಿಷಾ ಅಮೀನ್, ಸಾಮಾಜಿಕ ಕಾರ್ಯಕರ್ತ ಮುಝಮ್ಮಿಲ್ ನೂಯಿ ಅಡ್ಡೂರು, ಎ1 ಹೆಲ್ಪಿಂಗ್ ಫೌಂಡೇಶನ್‌ನ ಸ್ಥಾಪಕ ರಿಯಾಝ್ ಎ’1, ಕೆಎಂಸಿ ವೈದ್ಯ ಡಾ. ಶಿಷಿರ್, ಬಿರುವೆರ್ ಕುಡ್ಲದ ಕಾರ್ಯದರ್ಶಿ ರಕ್ಷಿತ್ ಪೂಜಾರಿ ಭಾಗವಹಿಸಿದ್ದರು.
‘ಸಿಟಿಗೋಲ್ಡ್’ನ ಮಂಗಳೂರು ಬ್ರಾಂಚ್ ಮ್ಯಾನೇಜರ್ ಅಹ್ಮದ್ ಹಫೀಝ್, ಮಾರ್ಕೆಟಿಂಗ್ ಮ್ಯಾನೇಜರ್ ಇಮ್ರಾನ್ ವಿ. ಮತ್ತಿತರರು ಉಪಸ್ಥಿತರಿದ್ದರು.
*ವಾರ್ಷಿಕೋತ್ಸವದ ಪ್ರಯುಕ್ತ ಚಿನ್ನಾಭರಣ ಖರೀದಿ ಹಾಗೂ ಮೇಕಿಂಗ್ ಚಾರ್ಜ್ ಮೇಲೆ ಶೇ.50 ಡಿಸ್ಕೌಂಟ್ ನೀಡಲಾಗುವುದು. ಹೆಚ್ಚುವರಿಯಾಗಿ ಮುಂದಿನ ಖರೀದಿಗೆ ಮೇಕಿಂಗ್ ಚಾರ್ಜ್ ಮೇಲೆ ಶೇ.10 ರಿಯಾಯಿತಿ ನೀಡಲಾಗುವುದು. ವಜ್ರಾಭರಣಗಳ ಖರೀದಿಯ ಮೇಲೆ ಶೇ.25 ಹಾಗೂ ಹೆಚ್ಚುವರಿಯಾಗಿ ಮುಂದಿನ ಖರೀದಿಗೆ ಶೇ.5 ರಿಯಾಯಿತಿ ನೀಡಲಾಗುವುದು ಎಂದು ಸಂಸ್ಥೆಯು ಪ್ರಕಟಿಸಿದೆ.