ದ.ಕ.ಜಿಲ್ಲಾ ‘ಅಹಿಂದ’ಕ್ಕೆ ಪದಾಧಿಕಾರಿಗಳ ಆಯ್ಕೆ

ಮಂಗಳೂರು: ಅಹಿಂದ ದ.ಕ. ಜಿಲ್ಲೆ ಮಂಗಳೂರು ಇದರ ನೂತನ ಅಧ್ಯಕ್ಷರಾಗಿ ಪದ್ಮನಾಭ ನರಿಂಗಾನ, ಉಪಾಧ್ಯಕ್ಷರಾಗಿ ಭರತೇಶ್ ಅಮೀನ್ ಬಜಾಲ್ ಹಾಗೂ ಮೇರಿ ಫೆರ್ನಾಂಡಿಸ್, ಗೌರವಾಧ್ಯಕ್ಷರಾಗಿ ವಾಸುದೇವ ಬೋಳೂರು, ಪ್ರಧಾನ ಕಾರ್ಯದರ್ಶಿಯಾಗಿ ಯೂಸುಫ್ ವಕ್ತಾರ್ ಉಳ್ಳಾಲ, ಕಾರ್ಯದರ್ಶಿಯಾಗಿ ಗಂಗಾಧರ ನಾಯ್ಕ್, ಮೀನಾಕ್ಷಿ ಫಜೀರು, ಕೋಶಾಧಿಕಾರಿಯಾಗಿ ಪುಂಡರೀಕಾಕ್ಷ ಯು. ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ನ.೨೪ರಂದು ಅಪರಾಹ್ನ ೩ಕ್ಕೆ ನಗರದ ಓಲ್ಡ್‌ಕೆಂಟ್ ರಸ್ತೆ ಬಳಿಯಿರುವ ಕುಲಾಲ ಭವನದಲ್ಲಿ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ನವೀನ್‌ಚಂದ್ರ ಡಿ. ಸುವರ್ಣ, ಪ್ರಸಾದ್ ಕಾಂಚನ್, ಬಿ.ಎ. ಮುಹಮ್ಮದ್ ಹನೀಫ್, ಸದಾಶಿವ ಉಳ್ಳಾಲ್, ಮಮತಾ ಡಿ.ಎಸ್.ಗಟ್ಟಿ, ಅಬ್ದುಲ್ ಜಲೀಲ್ ಮೋಂಟುಗೋಳಿ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story