Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಬಿಜೆಪಿಯ ಅಪಪ್ರಚಾರದ ತಂತ್ರಕ್ಕೆ...

ಬಿಜೆಪಿಯ ಅಪಪ್ರಚಾರದ ತಂತ್ರಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಾಗಿ ಹೋರಾಡಬೇಕು: ಯು.ಟಿ ಖಾದರ್

23 Nov 2022 10:29 PM IST
share
ಬಿಜೆಪಿಯ ಅಪಪ್ರಚಾರದ ತಂತ್ರಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಾಗಿ ಹೋರಾಡಬೇಕು: ಯು.ಟಿ ಖಾದರ್

ಕೊಣಾಜೆ: ಬಿಜೆಪಿಯವರ ಅಪಪ್ರಚಾರದ ತಂತ್ರಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಾಗಿ ಹೋರಾಡಬೇಕು.   ದ್ವೇಷದ ರಾಜಕಾರಣ ಕಾಂಗ್ರೆಸ್ ಪಕ್ಷದ ಸಿದ್ಧಾಂತವಲ್ಲ, ಪ್ರೀತಿ ವಿಶ್ವಾಸದ ಕೆಲಸವೇ ಪಕ್ಷಕ್ಕೆ ಪ್ರೇರಣೆ. ವಿಡಂಬನಾತ್ಮಕವಾಗಿ ನಡೆದುಕೊಳ್ಳದೆ ಒಗ್ಗಟ್ಟಾಗಿ ನಡೆದುಕೊಳ್ಳುವ ಕಾರ್ಯಗಳಾಗಲಿ ಎಂದು ವಿಪಕ್ಷ ಉಪನಾಯಕ ಹಾಗೂ ಶಾಸಕ ಯು.ಟಿ ಖಾದರ್ ಹೇಳಿದ್ದಾರೆ.

ಅವರು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಮಂಗಳೂರು ವಿಧಾನಸಭಾ ಕ್ಷೇತ್ರ,  ಮುಡಿಪು ಬ್ಲಾಕ್ ಮತ್ತು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಇದರ ಆಶ್ರಯದಲ್ಲಿ ಮುಡಿಪು ಹೂಹಾಕುವಕಲ್ಲು ಖಾಸಗಿ ಸಭಾಂಗಣದಲ್ಲಿ ಬುಧವಾರ ಜರಗಿದ  ಪಕ್ಷ ಸಂಘಟನೆಯ ಕುರಿತು ಮಾಹಿತಿ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು.

200 ಮನೆಗಳಿಗೆ ಒಂದು ಬೂತ್ ಇದೆ. ಅದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮತದಾರರ ಪಟ್ಟಿಯ ಪರಿಷ್ಕರಣೆ ಬೂತ್ ಕಾರ್ಯಕರ್ತರು ಮಾಡಬೇಕಿದೆ.  18 ವರ್ಷ ಮೇಲ್ಪಟ್ಟವರಿಗೆ ಎಲ್ಲರಿಗೂ ಮತದಾನ ಮಾಡುವ ಅವಕಾಶ ಕಲ್ಪಿಸಬೇಕು. ಜನವರಿ, ಫೆಬ್ರವರಿ, ಮಾಚ್9 ವರೆಗೂ 18 ವರ್ಷಗಳಾದವರನ್ನು ಮತದಾನದ ಹಕ್ಕು ಒದಗಿಸಲು ಸಾಧ್ಯ. ಅವರನ್ನು ದೂರವಾಣಿ ಮೂಲಕ ಸಂಪರ್ಕದಲ್ಲಿಟ್ಟುಕೊಂಡು ಸೇರಿಸುವ ಕಾರ್ಯವಾಗಬೇಕು. ಮಾಧ್ಯಮ ಗಳನ್ನು ನೋಡಿಕೊಂಡು ಮನೆಯಲ್ಲೇ ಉಳಿಯುವವರು ಅನೇಕರಿದ್ದಾರೆ, ಅವರನ್ನು ಜಾಗೃತಿಗೊಳಿಸುವ ಕಾರ್ಯಗಳಾಗಬೇಕು. ಗ್ರಾಮದ ಹಿರಿಯ ನಾಯಕರು ಪಕ್ಷದ ಕುರಿತು ಮುತುವರ್ಜಿ ವಹಿಸದೇ ಇದ್ದಲ್ಲಿ ಬೂತ್ ಕಾರ್ಯಕರ್ತರು ಕಾಳಜಿ ವಹಿಸುವುದಿಲ್ಲ. ಪಕ್ಷದ ಕಾರ್ಯಕತರು  ಸ್ವಪ್ರತಿಷ್ಠೆಯನ್ನು ಬಿಟ್ಟು ಪ್ರಾಮಾಣಿಕ, ಬದ್ಧತೆ, ಸಹೋದರತೆ, ಪ್ರೀತಿ ವಿಶ್ವಾಸದಿಂದ ಪಕ್ಷದ ಕಾರ್ಯದಲ್ಲಿ ಪಾಲ್ಗೊಳ್ಳಬೇಕು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಜಿಲ್ಲಾಧ್ಯಕ್ಷ  ಸುಭಾಷ್ ಚಂದ್ರ ಶೆಟ್ಟಿ ಮಾತನಾಡಿ, ಪಂಚಾಯತ್ ರಾಜ್ ಹಾಗೂ ಪಕ್ಷ ಒಂದೇ ಆಗಿರುತ್ತದೆ.   ಪಂಚಾಯತ್ ರಾಜ್ ಹಕ್ಕುಗಳಿಗೆ ಚ್ಯುತಿಯಾದಾಗ ಉಳ್ಳಾಲದಿಂದ ಆರಂಭ ಕಂಡ ಹೋರಾಟ ರಾಜ್ಯಕ್ಕೆ ವ್ಯಾಪಿಸಿತ್ತು. 15,000 ಮತದಾರರ ಡಿಲೀಷನ್ ಮಾಡಿರುವುದು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ  ಗೆಲ್ಲಲು ನಡೆಸಿರುವ ಷಡ್ಯಂತ್ರ. ಮತದಾರರ ಪಟ್ಟಿಯಲ್ಲಿ ಯಾವುದೇ ಗೊಂದಲಗಳಾಗದಂತೆ ನೋಡುವುದು ಪ್ರತಿಯೊಬ್ಬರ ಜವಾಬ್ದಾರಿ. ಚುನಾವಣೆ ಅನ್ನುವುದು ಯುದ್ಧ ಸೇನಾಪತಿ ಖಾದರ್ ಅವರನ್ನು ಉಳಿಸಲು ಕಾರ್ಯಕರ್ತರೆಲ್ಲರೂ ಸೈನಿಕರಾಗಿ ಕಾವಲು ಕಾಯಬೇಕಿದೆ. ಬೂತ್ ಅಧ್ಯಕ್ಷರು, ಪಂ.ಸದಸ್ಯರು, ಸೋತವರಲ್ಲಿ ಮಾಹಿತಿ ಪಡೆದುಕೊಂಡು ಜೋಡಿಸುವ ಕೆಲಸಗಳಾಗಬೇಕು. ಕಾರ್ಯಕರ್ತರ ಅಭಿಪ್ರಾಯಗಳನ್ನು ಪಡೆದುಕೊಂಡು ಪಕ್ಷವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಸಂಜೀವ ಗಟ್ಟಿ ಇವರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾಂಗ್ರೆಸ್ ಹಿರಿಯ ಮುಖಂಡ  ಪದ್ಮನಾಭ ನರಿಂಗಾನ ನುಡಿನಮನ ಸಲ್ಲಿಸಿದರು.

ಈ ಸಂದರ್ಭ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ್ ಉಳ್ಳಾಲ್, ಜಿ.ಪಂ ಮಾಜಿ ಸದಸ್ಯರಾದ  ತುಂಬೆ ಪ್ರಕಾಶ್ ಶೆಟ್ಟಿ, ಎನ್.ಎಸ್. ಕರೀಂ, ಬಂಟ್ವಾಳ ತಾ.ಪಂ ಮಾಜಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಮಂಗಳೂರು ತಾಲೂಕು ಪಂಚಾಯತ್ ಮಾಜಿ ಆಧ್ಯಕ್ಷ ಮಹಮ್ಮದ್ ಮೋನು, ಮಾಜಿ ಸದಸ್ಯರಾದ ಮಹಮ್ಮದ್ ಮುಸ್ತಾಫ, ಸುರೇಖಾ ಚಂದ್ರಹಾಸ್ ಜಬ್ಬಾರ್ ಬೋಳಿಯಾರ್, ವಿಲ್ಮಾ ಡಿ.ಸೋಜಾ,  ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಟಿ.ಎಸ್ ಅಬ್ದುಲ್ಲಾ, ದೇವದಾಸ ಭಂಡಾರಿ, ಜಿಲ್ಲಾ ಪ್ರ. ಕಾರ್ಯದರ್ಶಿ ರಹ್ಮಾನ್ ಕೋಡಿಜಾಲ್‌, ಉಪಾಧ್ಯಕ್ಷ ನಾಸಿರ್ ನಡುಪದವು, ಕಿಸಾನ್ ಘಟಕದ ಅಧ್ಯಕ್ಷ ಅರುಣ್ ಡಿ.ಸೋಜ, ಉಳ್ಳಾಲ ಬ್ಲಾಕ್ ಪ್ರ. ಕಾರ್ಯದರ್ಶಿ ಎ.ಕೆ. ರಹ್ಮಾನ್, ಉಳ್ಳಾಲ ನಗರಸಭಾ ಅಧ್ಯಕ್ಷ ಚಿತ್ರಕಲಾ ಚಂದ್ರಕಾಂತ್, ಪಂಚಾಯತ್ ಅಧ್ಯಕ್ಷರಾದ ಗಣೇಶ್ ನಾೈಕ್ ಕುರ್ನಾಡು,  ಶೈಲಜಾ ಶೆಟ್ಟಿ ನರಿಂಗಾನ, ರೈಹಾನ ಬಾಳೆಪುಣಿ, ಚಂಚಲಾಕ್ಷಿ ಕೊಣಾಜೆ,  ಮಹಮ್ಮದ್ ಸತ್ತಾರ್ ಬೆಳ್ಮ, ವಿಲ್ರೆಡ್ ಡಿಸೋಜ ಮುನ್ನೂರು,  ಜೆಸಿಂತಾ ಪಿಂಟೋ ಬೋಳಿಯಾರ್, ಬದ್ರುದ್ದೀನ್ ಹರೇಕಳ, ಆ್ಯಗ್ನೆಸ್ ಡಿ.ಸೋಜಾ ಇರಾ, ಲತಾ ಹರಿಪ್ರಸಾದ್,  ಉಪಾಧ್ಯಕ್ಷರಾದ  ನವಾಝ್ ಕಲ್ಲರಕೋಡಿ, ಇಕ್ಬಾಲ್ ಆಂಬ್ಲಮೊಗರು, ಶಕೂರ್ ಬೋಳಿಯಾರ್, ಸಿರಾಜ್ ಕಿನ್ಯ, ಮಹಮ್ಮದ್ ಪಜೀರು, ಮಾಜಿ ಅಧ್ಯಕ್ಷರಾದ ಸೂಫಿ ಕುಂಇ, ಜನಾರ್ಧನ ಗಟ್ಟಿ ಕನ್ನಿಮನೆ,ಅಚ್ಯುತ್ತ ಗಟ್ಟಿ, ಭರತ್‍ ರಾಜ್ ಶೆಟ್ಟಿ ಪಜೀರುಗುತ್ತು, ಚಂದ್ರಶೇಖರ ಆಳ್ವ ಬಾಳೆಪುಣಿ, ರಫೀಕ್ ಆಂಬ್ಲಮೊಗರು, ಇಮ್ತಿಯಾಝ್ ಪಜೀರು, ಸೀತಾರಾಮ ಶೆಟ್ಟಿ, ಪ್ಲೋರಿನ್ ಡಿಸೋಜಾ, ಮುಖಂಡರಾದ ಆಲ್ವಿನ್ ಡಿಸೋಜಾ, ಜಗದೀಶ್ ಪಲಾಯಿ, ಮುರಳೀಧರ್ ನರಿಂಗಾನ, ಸಮೀರ್ ಪಜೀರು, ಇಬ್ರಾಹಿಂ ನಡುಪದವು, ಬಶೀರ್ ಮುಡಿಪು, ದೇವಣ್ಣ ಶೆಟ್ಟಿ, ಯೂಸುಫ್ ಬಾವ ಬೆಳ್ಮ, ಯೂಸುಫ್ ಪಾನೆಲ, ಅಝೀಝ್ ಆರ್‍ಕೆಸಿ, ಅಬ್ದುಲ್ ರಹ್ಮಾನ್ ಮುದುಂಗಾರು, ಯಾಕುಬ್ ಮುದುಂಗಾರ್, ಜನಾರ್ಧನ ಕುಲಾಲ್, ಝಮೀರ್ ಮಂಜನಾಡಿ, ಝಕಾರಿಯಾ ಮಲಾರ್, ಖಲೀಲ್ ಪಟ್ಟೋರಿ, ಆಬ್ದುಲ್ ಖಾದರ್ ಮೂಳೂರು, ಗುರುರಾಜ್ ಭಟ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ  ಚಂದ್ರಿಕಾ ಉಪಸ್ಥಿತರಿದ್ದರು.

ರಾಜೀವ್ ಗ್ರಾಮ ಪಂಚಾಯತ್ ರಾಜ್ ಸಂಘಟನೆಯ ಮುಖ್ಯ ಸಂಘಟಕರಾದ ನಝರ್ ಷಾ ಪಟ್ಟೋರಿ, ಹೈದರ್ ಕೈರಂಗಳ ಪ್ರಸ್ತಾವನೆಗೈದರು. ಮುಡಿಪು ಬ್ಲಾಕ್ ಕಾಂಗ್ರೆಸ್ ಪ್ರ. ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ ಸ್ವಾಗತಿಸಿ, ರಹ್ಮಾನ್ ತೋಟಾಲ್ ವಂದಿಸಿದರು. 

share
Next Story
X