'40% ಕಮಿಷನ್ ರೋಡಲ್ಲಿ ಯಮ ಗುಂಡಿ': ಹೊಸ ಫೇಸ್ ಬುಕ್ ಖಾತೆ ತೆರೆದು ಬಿಜೆಪಿ ವಿರುದ್ಧ ಅಭಿಯಾನ
ಬೆಂಗಳೂರು: ರಾಜ್ಯ ಸರ್ಕಾರ ಪ್ರತಿ ಕಾಮಗಾರಿ ಟೆಂಡರ್ ಪಡೆಯಲು ಗುತ್ತಿಗೆದಾರರಲ್ಲಿ ಶೇ.40 ರಷ್ಟು ಕಮಿಷನ್ ಗೆ ಬೇಡಿಕೆ ಇಡುತ್ತಿದೆ ಎಂದು ಆರೋಪಿಸಿ, ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ '40% ಸರ್ಕಾರ' ಎಂಬ ಹೊಸ ಖಾತೆ ತೆರೆದು ಬಿಜೆಪಿ (BJP Karnataka) ವಿರುದ್ಧ ಅಭಿಯಾನ ಆರಂಭಿಸಲಾಗಿದೆ.
ಈ ಫೇಸ್ ಬುಕ್ ಖಾತೆಯಲ್ಲಿ ಮತದಾರರ ಮಾಹಿತಿ ಕಳವು ಪ್ರಕರಣ ಸೇರಿದಂತೆ ಹಲವು ಸಚಿವ ಸಂಪುಟದ ಸಚಿವರ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಸಂಬಂಧಿಸಿದಂತೆ ಸಚಿವರ ಫೋಟೋಗಳನ್ನು ಬಳಿಸಿ ಟ್ರೋಲ್ ಹಾಗೂ ಪತ್ರಿಕೆಯ ವರದಿಗಳನ್ನು ಪೋಸ್ಟ್ ಮಾಡಲಾಗಿದೆ.
'''40% ಕಮಿಷನ್ ರೋಡಲ್ಲಿ ಯಮ ಗುಂಡಿ, ಯಾಮಾರಿ ಬಿದ್ರೆ 100% ಡಮಾರು'', "ಶಾಲಾ ಮಕ್ಕಳಿಗೆ ಸೈಕಲ್ ಕೊಡದ 40% ಸರ್ಕಾರ", ಎಂಬಿತ್ಯಾದಿ ಪೋಸ್ಟ್ ಗಳ ಮೂಲಕ ರಸ್ತೆ ಗುಂಡಿ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಪೋಸ್ಟರ್ ಗಳನ್ನು ಪ್ರಕಟಿಸಿ, ರಾಜ್ಯ ಸರಕಾರದ ವಿರುದ್ಧ ಟೀಕಿಸಲಾಗಿದೆ. ಸದ್ಯ ಈ ಫೇಸ್ ಬುಕ್ ಖಾತೆಯನ್ನು ಲಕ್ಷಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ.
'40% ಸರ್ಕಾರ' ಫೇಸ್ ಬುಕ್ ಖಾತೆಯ ಪೋಸ್ಟ್ ಗಳು ಇಲ್ಲಿವೆ...