ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ್‌ಗೆ ಸನ್ಮಾನ

ಮಂಗಳೂರು, ನ.24: ಬರ್ಕೆ ಫ್ರೆಂಡ್ಸ್ ಇದರ 30ನೇ ವಾರ್ಷಿಕೋತ್ಸವ ಪ್ರಯುಕ್ತ ಮಣ್ಣಗುಡ್ಡ ಸರಕಾರಿ ಶಾಲೆಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ್ ಅವರನ್ನು ನಮ್ಮ ಕುಡ್ಲ ಚಾನೆಲ್ ವ್ಯವಸ್ಥಾಪಕ ಲೀಲಾಕ್ಷ ಕರ್ಕೇರ ಸನ್ಮಾನಿಸಿದರು.
ಈ ವೇಳೆ ಶಾಲಾ ಮಕ್ಕಳಿಗೆ ಸಂಘದ ವತಿಯಿಂದ ನೀಡಲಾದ ಸಮವಸ್ತ್ರವನ್ನು ಮುಖ್ಯ ಶಿಕ್ಷಕ ಗಣೇಶ್‌ಗೆ ಹತ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ವಾಸುದೇವ ಕಾಮತ್, ಮಾಧವ ಕಾಮತ್, ಮನು ಕುಮಾರ್, ಅಜಿತ್ ಮುಂಬೈ, ಪೂರ್ಣಚಂದ್ರ ಕುಲಾಲ್, ಕಾರ್ಪೊರೇಟರ್ ಸಂಧ್ಯಾ ಮೋಹನ್ ಆಚಾರ್, ಲೀಲಾವತಿ ಪ್ರಕಾಶ್, ಸಂಘದ ಸ್ಥಾಪಕ ಅಧ್ಯಕ್ಷ ಯೇಜ್ಞೇಶ್ವರ ಬರ್ಕೆ, ಗೌರವಾಧ್ಯಕ್ಷ ಸುಚಿಂದ್ರ ವಿ. ಅಮೀನ್, ಅಧ್ಯಕ್ಷ ಕಿಶನ್ ಕುಮಾರ್ ಉಪಸ್ಥಿತರಿದ್ದರು.
ತುಳು ಅಕಾಡಮಿಯ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿ ವಂದಿಸಿದರು.
Next Story