ಮಂಗಳೂರು: ಹಣತೆ ವ್ಯಾಪಾರಿಯ ಕೊಲೆ ಪ್ರಕರಣ: ಮತ್ತೋರ್ವ ಸೆರೆ

ಮಂಗಳೂರು, ನ.24: ಹಣತೆ ವ್ಯಾಪಾರಕ್ಕಾಗಿ ನಗರಕ್ಕೆ ಬಂದಿದ್ದ ತಮಿಳುನಾಡಿನ ಸೇಲಂ ನಿವಾಸಿ ಮಾಯವೇಳ್ ಪೆರಿಯಸಾಮಿ (52) ಎಂಬವರನ್ನು ಹಣದಾಸೆಗಾಗಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ಮೂರ್ತಿ (45) ಎಂಬಾತನನ್ನು ಬಂದರು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೆ ಬಂಧಿಸಲ್ಪಟ್ಟಿರುವ ಹೂವಿನ ಹಡಗಲಿಯ ರವಿ ಯಾನೆ ವಕೀಲ್ ನಾಯ್ಕ್ ಎಂಬಾತ ನೀಡಿದ ಮಾಹಿತಿಯಂತೆ ಮೂರ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರವಿಯ ಜೊತೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಮೂರ್ತಿ ಕೂಡ ಈ ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದ ಎಂದು ಅವರು ಮಾಹಿತಿ ನೀಡಿದ್ದಾರೆ.
ಹಣತೆ ವ್ಯಾಪಾರಿ ಮಾಯಾವೇಳ್ ಪೆರಿಯಸಾಮಿ ಬಳಿ ಸಾಕಷ್ಟು ಹಣವಿರಬಹುದು ಎಂದು ಭಾವಿಸಿದ್ದ ಆರೋಪಿ ರವಿ ಮದ್ಯಸೇವಿಸಿ ಬಂಗ್ರಕುಳೂರಿನ ಮೈದಾನಕ್ಕೆ ಕರೆದೊಯ್ದು ಕೊಲೆಗೈದಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
Next Story