ಚಾರ್ಮಾಡಿ: ಆಂಬುಲೆನ್ಸ್ - ಟ್ಯಾಂಕರ್ ಢಿಕ್ಕಿ; ಟ್ರಾಫಿಕ್ ಜಾಮ್

ಚಾರ್ಮಾಡಿ: ಘಾಟಿಯ ಒಂದನೇ ತಿರುವಿನ ಬಳಿ ಆಂಬುಲೆನ್ಸ್ ಹಾಗೂ ಟ್ಯಾಂಕರ್ ಢಿಕ್ಕಿ ಹೊಡೆದು ಸುಮಾರು ಒಂದು ಗಂಟೆ ಕಾಲ ಟ್ರಾಫಿಕ್ ಜಾಮ್ ಉಂಟಾದ ಘಟನೆ ಗುರುವಾರ ರಾತ್ರಿ ನಡೆದಿದೆ.
ಸಂಜೆಯ ವೇಳೆ ಘಟನಾ ಸ್ಥಳದ ಅನತಿ ದೂರದಲ್ಲಿ ಇನ್ನೊಂದು ಆಂಬುಲೆನ್ಸ್ ಹಾಗೂ ರಿಕ್ಷಾ ಪರಸ್ಪರ ಢಿಕ್ಕಿಯಾಗಿತ್ತು. ರಾತ್ರಿ ಇನ್ನೊಂದು ಆಂಬುಲೆನ್ಸ್ ಮತ್ತು ಲಾರಿ ಪರಸ್ಪರ ಢಿಕ್ಕಿಯಾಗಿದೆ.
ಪ್ರದೇಶದಲ್ಲಿ ಸಂಜೆ ಸುರಿದ ವಿಪರೀತ ಮಳೆಗೆ ರಸ್ತೆ ಜಾರುತ್ತಿದ್ದು ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬೆಳ್ತಂಗಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.
Next Story