ನ.26: ಹೇಮಾಂಶು ಪ್ರಕಾಶನದ ಎರಡು ಪುಸ್ತಕಗಳ ಬಿಡುಗಡೆ

ಮಂಗಳೂರು, ನ.24: ಹೇಮಾಂಶು ಪ್ರಕಾಶನವು ಪ್ರಕಟಿಸಿದ ಡಾ. ವಾಮನ ನಂದಾವರ ರಚಿಸಿದ ಮೂರನೆಯ ಮುದ್ರಣದ ‘ತುಳುವೆರೆ ಕುಸಾಲ್ ಕುಸೆಲ್’ ಕೃತಿ ಮತ್ತು ಚಂದ್ರಕಲಾ ನಂದಾವರ ಅವರ ಕೃತಿ ‘ಪಾವಡೆಯ ಹಾಸಿನಲ್ಲಿ...’ ಬಿಡುಗಡೆ ಕಾರ್ಯಕ್ರಮವು ನ.26ರಂದು ಸಂಜೆ 3:30ಕ್ಕೆ ನಗರದ ಬಳ್ಳಾಲ್‌ಬಾಗ್‌ನ ಪತ್ತ್‌ಮುಡಿ ಸೌಧದ ಒಂದನೇ ಮಹಡಿಯಲ್ಲಿ ನಡೆಯಲಿದೆ.
ನಿವೃತ್ತ ಪ್ರಾಂಶುಪಾಲ ಡಾ.ಎನ್.ಇಸ್ಮಾಯೀಲ್ ಅಧ್ಯಕ್ಷತೆ ವಹಿಸಿ ಪುಸ್ತಕಗಳನ್ನು ಬಿಡುಗಡೆಗೊಳಿಸುವರು.
ಡಾ. ವಾಮನ ನಂದಾವರ ಅವರ ಕೃತಿಯನ್ನು ಕಲ್ಲೂರು ನಾಗೇಶ ಹಾಗೂ ಚಂದ್ರಕಲಾ ನಂದಾವರ ಅವರ ಕೃತಿಯನ್ನು ಡಾ. ಪ್ರಮೀಳಾ ಮಾಧವ್ ಪರಿಚಯಿಸುವರು ಎಂದು ಪ್ರಕಟನೆ ತಿಳಿಸಿದೆ.
Next Story