ಮಹಾರಾಷ್ಟ್ರದ ಪಾಲ್ಗಾರ್ನಲ್ಲಿ 3.6 ತೀವ್ರತೆಯ ಲಘು ಕಂಪನ
![ಮಹಾರಾಷ್ಟ್ರದ ಪಾಲ್ಗಾರ್ನಲ್ಲಿ 3.6 ತೀವ್ರತೆಯ ಲಘು ಕಂಪನ ಮಹಾರಾಷ್ಟ್ರದ ಪಾಲ್ಗಾರ್ನಲ್ಲಿ 3.6 ತೀವ್ರತೆಯ ಲಘು ಕಂಪನ](https://www.varthabharati.in/sites/default/files/images/articles/2022/11/24/357614-1669310714.jpeg)
ಪಾಲ್ಘಾರ್, ನ. 24: ಮಹಾರಾಷ್ಟ್ರದ ಪಾಲ್ಘಾರ್ (Palghar)ಜಿಲ್ಲೆಯಲ್ಲಿ 3.6 ತೀವ್ರತೆಯ ಲಘು ಕಂಪನ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಲಘು ಕಂಪನ ಬುಧವಾರ ಮುಂಜಾನೆ 4.04 ಗಂಟೆಗೆ ಸಂಭವಿಸಿತು. ಲಘು ಕಂಪನ ದಹಾನುನಿಂದ 24 ಕಿ.ಮೀ. ದೂರದಲ್ಲಿ 5 ಕಿ.ಮೀ. ಆಳದಲ್ಲಿ ಕೇಂದ್ರವನ್ನು ಹೊಂದಿತ್ತು ಎಂದು ಜಿಲ್ಲಾ ವಿಪತ್ತು ನಿಯಂತ್ರಣ ಕೊಠಡಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಲಘು ಕಂಪನದಿಂದ ಯಾವುದೇ ಜೀವ ಹಾನಿ ಅಥವಾ ಗಾಯಗಳಾದ ಬಗ್ಗೆ ವರದಿಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
2018 ನವೆಂಬರ್ನಿಂದ ಪಾಲ್ಘಾರ್ನ ದಹಾನು ತಾಲೂಕಿನಲ್ಲಿ ಹಲವು ಕಂಪನಗಳು ಸಂಭವಿಸಿವೆ. ಹೆಚ್ಚಿನ ಕಂಪನಗಳು ದುಂಡಲ್ವಾಡಿ ಗ್ರಾಮದ ಸುತ್ತಮುತ್ತ ಕೇಂದ್ರವನ್ನು ಹೊಂದಿದ್ದವು ಎಂದು ಅವರು ಹೇಳಿದ್ದಾರೆ.
Next Story