ನ್ಯೂಝಿಲೆಂಡ್ ವಿರುದ್ಧ ಏಕದಿನ ಸರಣಿ: ಭಾರತ ಕ್ರಿಕೆಟ್ ತಂಡದಲ್ಲಿ ಉಮ್ರನ್, ಅರ್ಷದೀಪ್‍ಗೆ ಅವಕಾಶ

ಆಕ್ಲೆಂಡ್: ಅತಿಥೇಯ ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯ ಆರಂಭವಾಗಿದ್ದು, ಭಾರತದ ಉದಯೋನ್ಮುಖ ಆಟಗಾರರಾದ ಅರ್ಷದೀಪ್ ಸಿಂಗ್ ಮತ್ತು ಉಮ್ರನ್ ಮಲಿಕ್, ದೇಶದ ಪರ ಏಕದಿನ ಪಂದ್ಯ ಆಡುವ ಅವಕಾಶ ಪಡೆದಿದ್ದಾರೆ. ಟಾಸ್ ಗೆದ್ದ ನ್ಯೂಝಿಲೆಂಡ್ ತಂಡ ಭಾರತವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದೆ.
ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ಈಡನ್ ಪಾರ್ಕ್‍ನಲ್ಲಿ ನಡೆಯುತ್ತಿದ್ದು, ಸಂಜು ಸ್ಯಾಮ್ಸನ್ ಹಾಗೂ ಸೂರ್ಯಕುಮಾರ್ ಯಾದವ್ ಕೂಡಾ ಶಿಖರ್ ಧವನ್ ನೇತೃತ್ವದ ಭಾರತ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ನ್ಯೂಝಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸ್ ಟಾಸ್ ಗೆದ್ದು, ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಶಿಖರ್ ಧವನ್ 47 ಮತ್ತು ಶುಭ್‌ಮನ್ ಗಿಲ್ 41 ರನ್ ನೊಂದಿಗೆ, ವಿಕೆಟ್ ನಷ್ಟವಿಲ್ಲದೆ 20 ಓವರ್ ಗಳಲ್ಲಿ 90 ರನ್ ಗಳಿಸಿದ್ದಾರೆ.
ಟಿ-20 ಸರಣಿಯನ್ನು 1-0 ಅಂತರದಿಂದ ಭಾರತ ಗೆದ್ದಿದ್ದು, ಏಕದಿನ ಸರಣಿಯನ್ನೂ ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಗುರುವಾರ ಮಳೆಯಾಗಿರುವುದರಿಂದ ಅಧಿಕ ತೇವಾಂಶ ಇರುವ ಪಿಚ್, ವೇಗದ ಬೌಲರ್‍ಗಳಿಗೆ ನೆರವಾಗುವ ನಿರೀಕ್ಷೆ ಇದೆ.