ಪಕ್ಷದ ಮಹಿಳೆಗೆ ಅಶ್ಲೀಲ ನಿಂದನೆ ಆರೋಪ: ಒಬಿಸಿ ವಿಭಾಗದ ನಾಯಕನನ್ನು ಅಮಾನತುಗೊಳಿಸಿದ ತಮಿಳುನಾಡು ಬಿಜೆಪಿ

ಚೆನ್ನೈ: ಅಲ್ಪಸಂಖ್ಯಾತರ ವಿಭಾಗದ ಮುಖ್ಯಸ್ಥೆಯನ್ನು ಬೆದರಿಸಿ, ನಿಂದಿಸಿರುವ ತನ್ನ ರಾಜ್ಯ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ವಿಭಾಗದ ನಾಯಕ ಸೂರ್ಯ ಶಿವರನ್ನು ತಮಿಳುನಾಡು ಬಿಜೆಪಿ ಆರು ತಿಂಗಳ ಕಾಲ ಹುದ್ದೆಯಿಂದ ಅಮಾನತುಗೊಳಿಸಿದೆ.
ಫೋನ್ ಸಂಭಾಷಣೆಯ ರೆಕಾರ್ಡ್ ಮಾಡಿದ ಆಡಿಯೊ ಇದೀಗ ವೈರಲ್ ಆಗಿದ್ದು, ಮಹಿಳೆಯನ್ನು ಕೊಲ್ಲಲು ಗೂಂಡಾಗಳನ್ನು ಕಳುಹಿಸುತ್ತೇನೆ ಎಂದು ಆಡಿಯೊದಲ್ಲಿ ಬೆದರಿಸಿರುವ ಶಿವ, ಅಶ್ಲೀಲ ಲೈಂಗಿಕ ಟೀಕೆಗಳನ್ನೂ ಮಾಡಿದ್ದಾನೆ.
ಸೂರ್ಯ ಶಿವ ರನ್ನು ಆರು ತಿಂಗಳ ಕಾಲ ಪಕ್ಷದ ಎಲ್ಲಾ ಸ್ಥಾನಗಳಿಂದ ತೆಗೆದುಹಾಕಲಾಗಿದೆ.
ಶಿವ ಪಕ್ಷದ ಸ್ವಯಂಸೇವಕನಾಗಿ ಕೆಲಸ ಮಾಡಬಹುದು, ಅವರ ನಡವಳಿಕೆಯಲ್ಲಿ ಬದಲಾವಣೆಯನ್ನು ಕಂಡುಬಂದರೆ ಅವರಿಗೆ ಹೆಚ್ಚಿನ ಜವಾಬ್ದಾರಿಗಳು ಇರುತ್ತವೆ ಎಂದು ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಹೇಳಿದರು.
Next Story