ಮೊದಲ ಏಕದಿನ: ಭಾರತ ವಿರುದ್ಧ ನ್ಯೂಝಿಲ್ಯಾಂಡ್ ಗೆ ಭರ್ಜರಿ ಜಯ
ಟಾಮ್ ಲಥಾಮ್ ಶತಕ, ವಿಲಿಯಮ್ಸನ್ ಅರ್ಧಶತಕ

ಟಾಮ್ ಲಥಾಮ್ ಶತಕ, ವಿಲಿಯಮ್ಸನ್ ಅರ್ಧಶತಕ
ಆಕ್ಲಂಡ್,ನ.25: ವಿಕೆಟ್ ಕೀಪರ್-ಬ್ಯಾಟರ್ ಟಾಮ್ ಲಥಾಮ್ (ಔಟಾಗದೆ 145, 104 ಎಸೆತ, 19 ಬೌಂಡರಿ, 5 ಸಿಕ್ಸರ್) ಭರ್ಜರಿ ಶತಕ ಹಾಗೂ ನಾಯಕ ಕೇನ್ ವಿಲಿಯಮ್ಸನ್(ಔಟಾಗದೆ 94, 98 ಎಸೆತ, 7 ಬೌಂಡರಿ, 1 ಸಿಕ್ಸರ್ )ಅರ್ಧಶತಕದ ಕೊಡುಗೆಯ ನೆರವಿನಿಂದ ಆತಿಥೇಯ ನ್ಯೂಝಿಲ್ಯಾಂಡ್ ತಂಡ ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು 7 ವಿಕೆಟ್ ಗಳ ಅಂತರದಿಂದ ಗೆದ್ದುಕೊಂಡಿದೆ.
ಗೆಲುವಿಗೆ 307 ರನ್ ಗುರಿ ಬೆನ್ನಟ್ಟಿದ ನ್ಯೂಝಿಲ್ಯಾಂಡ್ 47.1 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 309 ರನ್ ಗಳಿಸಿತು. ವಿಲಿಯಮ್ಸನ್ ಹಾಗೂ ಲಥಾಮ್ 4ನೇ ವಿಕೆಟಿಗೆ ಮುರಿಯದ ಜೊತೆಯಾಟದಲ್ಲಿ 221 ರನ್ ಸೇರಿಸಿ ಗೆಲುವಿನ ಹಾದಿ ಸುಗಮಗೊಳಿಸಿದರು.
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತವು ಶ್ರೇಯಸ್ ಅಯ್ಯರ್(80 ರನ್, 76 ಎಸೆತ), ಶಿಖರ್ ಧವನ್(72 ರನ್, 77 ಎಸೆತ) ಹಾಗೂ ಶುಭಮನ್ ಗಿಲ್(50 ರನ್, 65 ಎಸೆತ)ಅರ್ಧಶತಕದ ಕೊಡುಗೆಯ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 306 ರನ್ ಗಳಿಸಿತು.
Next Story