KSRTC ಸ್ಪರ್ಧೆಯ ವಿಜೇತರಿಗೆ ಬಹುಮಾನ, ಉಚಿತ ಟಿಕೆಟ್: ವಿ.ಅನ್ಬುಕುಮಾರ್

ಬೆಂಗಳೂರು, ನ.25: ಕೆಎಸ್ಸಾರ್ಟಿಸಿ ಪ್ರಯಾಣಿಕರಿಗಾಗಿ ಆಯೋಜಿಸಿದ್ದ ‘ನಮ್ಮೊಡನೆ ನಿಮ್ಮ ಪ್ರವಾಸ’ ಪ್ರಯಾಣದ ವಿಡಿಯೋ ಹಂಚಿಕೊಳ್ಳುವ ಸ್ಪರ್ಧೆಯಲ್ಲಿ ಐದು ಮಂದಿ ಸ್ವರ್ಧಿಗಳು ಆಯ್ಕೆ ಆಗಿದ್ದು, ವಿಜೇತರಿಗೆ ಬಹುಮಾನ ಮೌಲ್ಯದ ಅವರ ಆಯ್ಕೆಯ ಸ್ಥಳಕ್ಕೆ ಉಚಿತ ಟಿಕೆಟ್ ನೀಡಲಾಗುವುದು ಎಂದು ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ತಿಳಿಸಿದ್ದಾರೆ.
ದಸರಾ ಸಂದರ್ಭದಲ್ಲಿ ಮೈಸೂರು ಹಾಗೂ ಮಂಗಳೂರು ವಿಭಾಗದಿಂದ ವಿಶೇಷ ಪ್ಯಾಕೇಜ್ ಪ್ರವಾಸ ಏರ್ಪಡಿಸಲಾಗಿತ್ತು. ಈ ಹಿನ್ನಲೆಯಲ್ಲಿ ಪ್ರಯಾಣದ ವಿಡಿಯೋ ಹಂಚಿಕೊಳ್ಳುವ ಸ್ಪರ್ಧೆಯನ್ನು ಆಯೋಜಿಸಿತ್ತು. ವಿಜೇತರಿಗೆ ಪ್ರಥಮ 5ಸಾವಿರ ರೂ., ದ್ವಿತೀಯ 3 ಸಾವಿರ ರೂ. ಹಾಗೂ ತೃತೀಯ ಬಹುಮಾನವಾಗಿ 2ಸಾವಿರ ರೂ.ನಿಗದಿ ಪಡಿಸಲಾಗಿತ್ತು.
ಫೇಸ್‍ಬುಕ್ ವಿಭಾಗದ ಸ್ಪರ್ಧೆಯಲ್ಲಿ ಇಂದಿರಾ ಪ್ರಥಮ, ಮಾನಸ ರಾವ್ ದ್ವಿತೀಯ ಹಾಗೂ ತನುಜ ಎಸ್. ಪೂಜಾರಿ ಅವರು ತೃತೀಯ ಬಹುಮಾನ ಪಡೆದಿದ್ದಾರೆ. ಟ್ವಿಟರ್ ವಿಭಾಗದಲ್ಲಿ ರಶ್ಮಿ ಶೆಟ್ಟಿ ಪ್ರಥಮ, ಕುಡ್ಲ ಡಿ.ರಾಜ್ ವಿಲಾಗ್ಸ್‍ಗೆ ದ್ವಿತೀಯ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಕೆಎಸ್ಸಾರ್ಟಿಸಿ ಪ್ರಕಟನೆಯಲ್ಲಿ ತಿಳಿಸಿದೆ.
ನಮ್ಮೊಡನೆ ನಿಮ್ಮ ಪ್ರವಾಸ
— KSRTC (@KSRTC_Journeys) November 25, 2022
Experience Your Travel With Us pic.twitter.com/UVNhp6bSJ1