ವಿದ್ಯುತ್ ಪ್ರವಹಿಸಿ ಶಿಕ್ಷಕ ಮೃತ್ಯು
ಮಡಿಕೇರಿ ನ.25 ; ವಿದ್ಯುತ್ ಪ್ರವಹಿಸಿ ಶಿಕ್ಷಕರೊಬ್ಬರು ಮೃತಪಟ್ಟ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಹೆಬ್ಬಾಲೆ ಗ್ರಾಮದ ಮೊಗಣ್ಣ ಎಂಬುವರ ಪುತ್ರ ಪ್ರಾಥಮಿಕ ಶಾಲಾ ಶಿಕ್ಷಕ ಹೆಚ್.ಎಂ. ಗಿರೀಶ್(42) ಮೃತ ಶಿಕ್ಷಕ್ಷ ಎಂದು ತಿಳಿದು ಬಂದಿದೆ.
ಹೆಬ್ಬಾಲೆಯ ಗ್ರಾಮದೇವತೆ ಶ್ರೀ ಬನಶಂಕರಿ ಉತ್ಸವದ ಹಿನ್ನಲೆಯಲ್ಲಿ ಮನೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಈ ವೇಳೆ ಮನೆಯ ಮಹಡಿಗೆ ತೆರಳಿದ್ದ ಶಿಕ್ಷಕ ಆಕಸ್ಮಿಮಕವಾಗಿ ವಿದ್ಯುತ್ ಪ್ರಹವಿಸಿ ಮೃತಪಟ್ಟಿದ್ದಾರೆನ್ನಲಾಗಿದೆ.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
Next Story