ಮಂಗಳೂರು: ನ.27ರಂದು ‘ಹೋಮ್ ಆರ್ಟ್ ಲೈಟ್ಸ್’ ಶುಭಾರಂಭ

ಮಂಗಳೂರು, ನ.25: ನಗರದ ಪಾಂಡೇಶ್ವರದ ‘ಅರಿಸ್ತಾ ಎನ್‌ಕ್ಲೇವ್’ನ ನೆಲ ಅಂತಸ್ತಿನಲ್ಲಿ ತೆರೆಯಲಾದ ಬ್ರಾಂಡೆಡ್ ಲೈಟಿಂಗ್ ಔಟ್‌ಲೆಟ್ ಶೋರೂಂ ‘ಹೋಮ್ ಆರ್ಟ್ ಲೈಟ್ಸ್’ ನ.27ರ ಪೂ.11ಕ್ಕೆ ಶುಭಾರಂಭಗೊಳ್ಳಲಿದೆ.
ಹವೇಲ್ಸ್ ಇಂಡಿಯಾ ಲಿ. ಕರ್ನಾಟಕ ಇದರ ಬ್ರಾಂಚ್ ಹೆಡ್ ನವೀನ್ ಚಂದ್ರನ್ ಮತ್ತು ಹವೇಲ್ಸ್ ಇಂಡಿಯಾ ಲಿ.ಇದರ ಹಿರಿಯ ಪ್ರಧಾನ ವ್ಯವಸ್ಥಾಪಕ ಸುರೇಶ್ ಕುಮಾರ್ ಹೆಬ್ರಿ ಶೋರೂಂ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ರಾಜ್ಯ ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್, ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್‌ಗಳಾದ ದಿವಾಕರ್ ಪಾಂಡೇಶ್ವರ ಮತ್ತು ಅಬ್ದುಲ್ಲತೀಫ್ ಕಂದಕ್ ಭಾಗವಹಿಸಲಿದ್ದಾರೆ.
ಮಂಗಳೂರಿನಲ್ಲಿ ಮೊತ್ತ ಮೊದಲ ಬಾರಿಗೆ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಸಿಗುವ ಬ್ರಾಂಡೆಟ್ ಲೈಟಿಂಗ್ ಔಟ್‌ಲೆಟ್ ಶೋರೂಂ ಇದಾಗಿದೆ. 2300 ಚ.ಅ. ವಿಸ್ತೀರ್ಣದ ಹೋಮ್ ಆರ್ಟ್ ಲೈಟ್ಸ್ ಮಳಿಗೆಯಲ್ಲಿ ಹೆವೆಲ್ಸ್ ಪ್ರೀಮಿಯಂ ಬ್ರಾಂಡ್ ಡೆಕೊ ಲೈಟ್ಸ್, ವಾಲ್ ಲೈಟ್ಸ್, ಚಂಡೇಲಿಯರ್, ಪಾನಲ್ ಲೈಟ್ಸ್, ಸ್ಟ್ರಿಪ್‌ಲೈಟ್ಸ್, ಸ್ಮಾರ್ಟ್‌ಲೈಟ್ಸ್ ಹಾಗೂ ವಿವಿಧ ವಿನ್ಯಾಸದ ಫ್ಯಾನ್‌ಗಳು, ವಾಟರ್ ಪ್ಯೂರಿ ಫೈಯರ್, ವಾಟರ್ ಹೀಟರ್ ಸಹಿತ ಮನೆ ಮತ್ತು ವ್ಯಾಪಾರ ಕೇಂದ್ರಗಳಿಗೆ ಬೇಕಾಗಿರುವ ಸಾಮಗ್ರಿಗಳು ದೊರೆಯಲಿದೆ ಎಂದು ಪ್ರಕಟನೆ ತಿಳಿಸಿದೆ.