ಚೀನಾದಲ್ಲಿ ಕೋವಿಡ್ ಸೋಂಕು ದಿಢೀರ್ ಉಲ್ಬಣ

ಬೀಜಿಂಗ್, ನ.25: ಚೀನಾದಲ್ಲಿ ಕೋವಿಡ್ ಸೋಂಕು(covid infection) ಪ್ರಕರಣ ಕಳೆದ 2 ದಿನದಲ್ಲಿ ದಿಢೀರನೆ ಉಲ್ಬಣಗೊಂಡಿದೆ. ಈ ಮಧ್ಯೆ, ದೇಶದಲ್ಲಿ ಮತ್ತೆ ಲಾಕ್ ಡಾನ್(Lock Dawn) ಜಾರಿಯಾಗಲಿದೆ ಎಂಬ ವದಂತಿಯಿಂದ ಆತಂಕಗೊಂಡಿರುವ ಜನತೆ ಆಹಾರ ವಸ್ತುಗಳ ಸಂಗ್ರಹಕ್ಕೆ ಮಾರುಕಟ್ಟೆಗೆ ಮುಗಿಬಿದ್ದಿದ್ದಾರೆ ಎಂದು ವರದಿಯಾಗಿದೆ.
ಚೀನಾದಲ್ಲಿ ಶುಕ್ರವಾರ 32,695 ಹೊಸ ಸೋಂಕು ಪ್ರಕರಣ ದಾಖಲಾಗಿದ್ದು ಇದರಲ್ಲಿ 1,860 ಪ್ರಕರಣ ರಾಜಧಾನಿ ಬೀಜಿಂಗ್ ನಲ್ಲಿ ವರದಿಯಾಗಿದೆ. ಈ ಮಧ್ಯೆ, ತೆರೆದ ಬಯಲಿನಲ್ಲಿ ತಾತ್ಕಾಲಿಕವಾಗಿ ರಚಿಸಿರುವ ಆಸ್ಪತ್ರೆಗಳಲ್ಲಿ ಕ್ವಾರಂಟೈನ್ ಕೇಂದ್ರ(Quarantine Center)ಗಳ ನಿರ್ಮಾಣವನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಈ ವರದಿ ಪ್ರಸಾರವಾಗುತ್ತಿದ್ದಂತೆಯೇ ಆತಂಕಗೊಂಡ ಜನರು ಅಂಗಡಿ ಹಾಗೂ ಮಾರುಕಟ್ಟೆಗೆ ಧಾವಿಸಿ ಆಹಾರ ವಸ್ತು ಹಾಗೂ ಇತರ ಅಗತ್ಯದ ವಸ್ತುಗಳನ್ನು ಸಂಗ್ರಹಿಸಲು ಧಾವಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Next Story





