ಸ್ವೀಡನ್ ವಿರುದ್ಧ ಮೊಕದ್ದಮೆ ದಾಖಲಿಸಿದ ಗ್ರೆಟಾ ಥನ್ಬರ್ಗ್
![ಸ್ವೀಡನ್ ವಿರುದ್ಧ ಮೊಕದ್ದಮೆ ದಾಖಲಿಸಿದ ಗ್ರೆಟಾ ಥನ್ಬರ್ಗ್ ಸ್ವೀಡನ್ ವಿರುದ್ಧ ಮೊಕದ್ದಮೆ ದಾಖಲಿಸಿದ ಗ್ರೆಟಾ ಥನ್ಬರ್ಗ್](https://www.varthabharati.in/sites/default/files/images/articles/2022/11/25/357753-1669396674.jpeg)
ಸ್ಟಾಕ್ಹೋಮ್, ನ.25: ಸ್ವೀಡನ್ ದೇಶ (Sweden is a country)ಹವಾಮಾನ ಬದಲಾವಣೆಯ ಸಮಸ್ಯೆ ನಿವಾರಣೆಯ ವಿಷಯದಲ್ಲಿ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿ ಹವಾಮಾನ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್ (Greta Thunberg)ಸೇರಿದಂತೆ 600ಕ್ಕೂ ಅಧಿಕ ಯುವಜನತೆ ಶುಕ್ರವಾರ ಮೊಕದ್ದಮೆ ದಾಖಲಿಸಿರುವುದಾಗಿ ವರದಿಯಾಗಿದೆ.
ಸ್ವೀಡನ್ ನ ಕಾನೂನು ವ್ಯವಸ್ಥೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಪ್ರಕರಣ ಈ ಹಿಂದೆಂದೂ ದಾಖಲಾಗಿಲ್ಲ ಎಂದು ಮೊಕದ್ದಮೆ ದಾಖಲಿಸಿದ ಕಾರ್ಯಕರ್ತರನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.
ಶುಕ್ರವಾರ ಸ್ಟಾಕ್ಹೋಮ್ ನಲ್ಲಿ ನಡೆದ ಪ್ರತಿಭಟನೆ ಸಂದರ್ಭ ಮೊಕದ್ದಮೆಯನ್ನು ಸ್ಟಾಕ್ಹೋಮ್ ಜಿಲ್ಲಾ ನ್ಯಾಯಾಲಯಕ್ಕೆ ಸಾಂಕೇತಿಕವಾಗಿ ಸಲ್ಲಿಸಲಾಗಿದೆ. ಮೊಕದ್ದಮೆಯನ್ನು ಆನ್ ಲೈನ್ ಮೂಲಕ ಈಗಾಗಲೇ ಸ್ಟಾಕ್ಹೋಮ್ ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ ಎಂದು ಮೂಲಗಳು ಹೇಳಿವೆ.
Next Story