'ಮದುವೆಯಾಗಲು ಹುಡುಗಿ ಹುಡುಕಿಕೊಡಿ': ಶಿವಮೊಗ್ಗ ಎಸ್‌ಪಿಗೆ ಪತ್ರ ಬರೆದ ಯುವಕ!
ಶಿವಮೊಗ್ಗ: ಮದುವೆ ಮಾಡಿಕೊಳ್ಳಲು ಹುಡುಗಿ ಹುಡುಕಿಕೊಡುವಂತೆ ಭದ್ರಾವತಿಯ ಯುವಕನೋರ್ವ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿರುವ ಘಟನೆ ನಡೆದಿದೆ.
ಮೂಲತಃ ಆಂಧ್ರಪ್ರದೇಶದ ಮಡಕಶಿರಾದ ನಿವಾಸಿ ಪ್ರವೀಣ್ ಪೋಷಕರು ಕೆಲಸದ ನಿಮಿತ್ತ ಭದ್ರಾವತಿಯಲ್ಲಿ ನೆಲೆಸಿದ್ದಾರೆ. ಪ್ರವೀಣ್ ತಾನು ಈ ಹಿಂದೆ ಬೆಂಗಳೂರಿನ ಸಾಫ್ಟ್‌ವೇರ್ ಹಾಗೂ ಚಿಟ್ಸ್ ಕಂಪನಿಗಳಲ್ಲಿ ಕೆಲಸ ಮಾಡಿರುವೆ. ಸದ್ಯ ಭದ್ರಾವತಿಯಲ್ಲಿರುವ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿರುವೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾನೆ.
ಪತ್ರದಲ್ಲಿ ತನ್ನ ಜಾತಿ, ವಿಳಾಸ ಉಲ್ಲೇಖಿಸಿರುವ ಯುವಕ, 'ನಾನು ವಧು ಅನ್ವೇಷಣೆಯಲ್ಲಿ ತೊಡಗಿದ್ದು, ಯಾರೂ ಸರಿಹೋಗದ ಆಗದ ಕಾರಣ ತಾವೇ ಹುಡುಗಿ ಹುಡುಕಿಕೊಡಿ' ಎಂದು ಮನವಿ ಮಾಡಿಕೊಂಡಿದ್ದಾನೆ. ತನ್ನ ಬಗ್ಗೆ ಮಾಹಿತಿ ಪಡೆಯಲು ಭದ್ರಾವತಿ ನಗರಸಭೆ ಸದಸ್ಯರೊಬ್ಬರ ಹೆಸರು ಉಲ್ಲೇಖಿಸಿದ್ದಾನೆ.
ಇದನ್ನೂ ಓದಿ: ಬುಲ್‌ಬುಲ್ ಹಕ್ಕಿ ಮೇಲೆ ಸಾವರ್ಕರ್ ಸವಾರಿ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್
Next Story