ಕಾಂಗ್ರೆಸ್ ಬಿಟ್ಟಿದ್ದಕ್ಕೆ ಜನರು ನನ್ನನ್ನು ಚುನಾವಣೆಯಲ್ಲಿ ಸೋಲಿಸಿದ್ದಾರೆ: ಸಚಿವ ಎಂಟಿಬಿ ನಾಗರಾಜ್
ಚಿಕ್ಕಬಳ್ಳಾಪುರ, ನ.26: ''ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಪಕ್ಷ ಸೇರಿದ್ದಕ್ಕೆ ನನ್ನನ್ನು ಜನರು ಚುನಾವಣೆಯಲ್ಲಿ ಸೋಲಿಸಿದ್ದಾರೆ'' ಎಂದು ಪೌರಾಡಳಿತ ಇಲಾಖೆ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಜರಬಂಡಹಳ್ಳಿಯ ಗ್ರಾಮದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು, ''ನನ್ನನ್ನು ಉಪ ಚುನಾವಣೆಯಲ್ಲಿ ಜನ ಸೋಲಿಸಿರುವುದರಿಂದ ನನಗೆ ಏನೂ ಸಮಸ್ಯೆ ಆಗಿಲ್ಲ, ದೇವರು ನನಗೆ ಎಲ್ಲವನ್ನೂ ಕೊಟ್ಟಿದ್ದಾನೆ. ನನಗೆ ಬಡವರ ಸೇವೆ ಮಾತ್ರ ಬೇಕು'' ಎಂದು ಹೇಳಿದ್ದಾರೆ.
''ನಾನು ಸೋತ ಕಾರಣ ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆ ಆಗಿದೆ ಎಂದ ಅವರು, ಜನರು ಚುನಾವಣಾ ಸಮಯದಲ್ಲಿ ಒಳ್ಳೆಯ ಕೆಲಸಗಳೆನ್ನಲ್ಲ ಮರೆಯುತ್ತಾರೆ. ಜನ ನಿದ್ದೆ ಮಂಪರಿನಲ್ಲಿ ಇದ್ದಂತೆ ಮತ ಹಾಕುತ್ತಾರೆ'' ಎಂದು ಸಚಿವರು ವ್ಯಂಗ್ಯವಾಡಿದ್ದಾರೆ.
Next Story