ವಲಸಿಗರ ಸಂಖ್ಯೆಯನ್ನು ಕಡಿಮೆಗೊಳಿಸಲು ವಿದೇಶಿ ವಿದ್ಯಾರ್ಥಿಗಳಿಗೆ ನಿಯಂತ್ರಣ ವಿಧಿಸಲು ರಿಷಿ ಸುನಕ್ ಚಿಂತನೆ
ಇಂಗ್ಲೆಂಡ್‍ಗೆ ವಲಸೆ ಹೋಗುವವರ ಪೈಕಿ ಭಾರತೀಯರೇ ಬಹುಸಂಖ್ಯಾತರು

ಲಂಡನ್: ದೇಶಕ್ಕೆ ಆಗಮಿಸುವ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಬ್ರಿಟನ್ ಪ್ರಧಾನಿ ರಿಷಿ ಸುನಕ್ (Rishi Sunak) ಪರಿಶೀಲಿಸಲಿದ್ದಾರೆ ಎಂದು ವರದಿಯಾಗಿದೆ.
`ಕಡಿಮೆ ಗುಣಮಟ್ಟ'ದ್ದೆಂದು ಹೇಳಲಾದ ಪದವಿ ಶಿಕ್ಷಣಕ್ಕಾಗಿ ದೇಶಕ್ಕೆ ಆಗಮಿಸಿ ಜೊತೆಗೆ ತಮ್ಮೊಂದಿಗೆ ತಮ್ಮ ಅವಲಂಬಿತರನ್ನು ತರುವ ವಿದೇಶಿ ವಿದ್ಯಾರ್ಥಿಗಳಿಗೆ ಕೆಲವೊಂದು ನಿಯಂತ್ರಣಗಳನ್ನು ವಿಧಿಸುವ ಕುರಿತು ಸುನಕ್ ಚಿಂತಿಸುತ್ತಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯದ ವಕ್ತಾರರು ತಿಳಿಸಿದ್ದಾರೆ. ಆದರೆ ಕಡಿಮೆ ಗುಣಮಟ್ಟದ ಪದವಿ ಶಿಕ್ಷಣದ ಕುರಿತು ಹೆಚ್ಚಿನ ವ್ಯಾಖ್ಯಾನ ಅವರಿಂದ ಬಂದಿಲ್ಲ.
ಇತ್ತೀಚಿನ ಅಂಕಿಅಂಶಗಳ ಪ್ರಕಾರ ಇಂಗ್ಲೆಂಡ್‍ಗೆ ವಲಸೆ ಹೋದವರ ಸಂಖ್ಯೆ 2021 ರಲ್ಲಿ 1,73,000 ಆಗಿದ್ದರೆ ಈ ವರ್ಷ ಈ ಸಂಖ್ಯೆ 3,31,000 ರಷ್ಟು ಹೆಚ್ಚಾಗಿ 5,04,000 ಗೆ ಏರಿಕೆಯಾಗಿದೆ.
ಇಂಗ್ಲೆಂಡ್‍ಗೆ ವಲಸೆ ಹೋಗುವವರ ಪೈಕಿ ಭಾರತೀಯರೇ ಬಹುಸಂಖ್ಯಾತರಾಗಿದ್ದಾರೆ. ಈ ಹಿಂದೆ ಚೀನೀ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಂಗ್ಲೆಂಡ್‍ಗೆ ಹೋಗುತ್ತಿದ್ದರೆ ಈಗ ಭಾರತೀಯರು ಚೀನೀಯರನ್ನು ಹಿಂದಿಕ್ಕಿದ್ದಾರೆ.
ಇದನ್ನೂ ಓದಿ: ಏನೂ ಧರಿಸದೇ ಇದ್ದರೂ ಮಹಿಳೆ ಸುಂದರವಾಗಿ ಕಾಣಿಸುತ್ತಾಳೆ: ವಿವಾದ ಸೃಷ್ಟಿಸಿದ ರಾಮ್‌ದೇವ್ ಹೇಳಿಕೆ







