ದಕ್ಷಿಣ ಕೊರಿಯಾ ರಾಜಧಾನಿ ಸಿಯೋಲ್ ನಲ್ಲಿ ಚಾಲಕ ರಹಿತ ಬಸ್ಸು ಸಂಚಾರಕ್ಕೆ ಚಾಲನೆ

ಸಿಯೋಲ್, ನ.26: ದಕ್ಷಿಣ ಕೊರಿಯಾ (South Korea)ರಾಜಧಾನಿ ಸಿಯೋಲ್ನಲ್ಲಿ ಚಾಲಕ ರಹಿತ ಬಸ್ಸುಗಳ ಸಂಚಾರಕ್ಕೆ ಶುಕ್ರವಾರ ಚಾಲನೆ ನೀಡಲಾಗಿದೆ. ಇದು ಪ್ರಯೋಗಾರ್ಥ ಪರೀಕ್ಷೆ. ಮುಂದಿನ ದಿನಗಳಲ್ಲಿ ಚಾಲಕ ರಹಿತ ವಾಹನಗಳಲ್ಲಿ ಪ್ರಯಾಣಿಸಲು ಜನರನ್ನು ಪ್ರೇರೇಪಿಸುವ ಉದ್ದೇಶವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈಗ ಹ್ಯುಂಡೈ ಸಂಸ್ಥೆ (Hyundai Corporation)ಖರೀದಿಸಿರುವ 42 ಡಾಟ್ ಎಂಬ ನವೋದ್ಯಮ ಈ ಬಸ್ಸನ್ನು ವಿನ್ಯಾಸಗೊಳಿಸಿದೆ. ದುಬಾರಿ ಬೆಲೆಯ ಸೆನ್ಸಾರ್ನ ಬದಲು ಕ್ಯಾಮೆರಾ ಹಾಗೂ ರೆಡಾರ್ಗಳ ನೆರವಿನಿಂದ ಇದು ರಸ್ತೆಯಲ್ಲಿ ಚಲಿಸುತ್ತದೆ. ಮುಂದಿನ ದಿನದಲ್ಲಿ ಚಾಲಕ ರಹಿತ ಸರಕು ಲಾರಿಗಳನ್ನು ರಸ್ತೆಗೆ ಇಳಿಸುವ ಯೋಜನೆಯಿದೆ ಎಂದು ಸಂಸ್ಥೆ ಹೇಳಿದೆ.
Next Story