ಬಂಟ್ವಾಳ: ಕಾರು - ಪಿಕಪ್ ಮಧ್ಯೆ ಮುಖಾಮುಖಿ ಢಿಕ್ಕಿ
ನಿಯಂತ್ರಣ ಕಳೆದು ರಸ್ತೆಯ ಬದಿಯ ಮನೆಗೆ ನುಗ್ಗಿದ ಪಿಕಪ್
ನಿಯಂತ್ರಣ ಕಳೆದು ರಸ್ತೆಯ ಬದಿಯ ಮನೆಗೆ ನುಗ್ಗಿದ ಪಿಕಪ್
ಬಂಟ್ವಾಳ, ನ.26: ಚಾಲಕನ ನಿಯಂತ್ರಣ ತಪ್ಪಿ ವಿರುದ್ಧ ದಿಕ್ಕಿನಲ್ಲಿ ಬಂದ ಕಾರೊಂದು ಪಿಕಪ್ ವಾಹನಕ್ಕೆ ಢಿಕ್ಕಿಯಾಗಿ ಬಳಿಕ ಪಿಕಪ್ ವಾಹನ ರಸ್ತೆಯ ಬದಿಯಲ್ಲಿದ್ದ ಮನೆಗೆ ನುಗ್ಗಿದ ಘಟನೆ ತಾಲೂಕಿನ ಬಂಟ್ವಾಳ ಸಮೀಪದ ಮಣಿಹಳ್ಳ ಎಂಬಲ್ಲಿ ಶನಿವಾರ ರಾತ್ರಿ ನಡೆದಿದೆ.
ಪುಂಜಾಲಕಟ್ಟೆಯಿಂದ ಬರುತ್ತಿದ್ದ ಕಾರು ಬಂಟ್ವಾಳ ಕಡೆಯಿಂದ ಬರುತ್ತಿದ್ದ ಮೆಸ್ಕಾಂ ಇಲಾಖೆಗೆ ಸೇರಿದ ಪಿಕಪ್ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿ ತಪ್ಪಿಸಲು ಪ್ರಯತ್ನಿಸಿದ ಪಿಕಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮನೆಗೆ ನುಗ್ಗಿದೆ.
ಘಟನೆಯಿಂದ ಲಕ್ಷಣ್ ಎಂಬವರ ಮನೆಯ ಗೋಡೆ ಜರಿದು ಬಿದ್ದಿದ್ದು ಬೇರೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.