ಯುವಕ ನಾಪತ್ತೆ

ಮಂಗಳೂರು: ನಾದಿನಿಯ ಮನೆಗೆ ಬಂದಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾದವರನ್ನು ಉಜಿರೆ ಗ್ರಾಮ ಬಡೆಕೊಟ್ಟು ಸಂತೋಷ್ ಎನ್. ಯಾನೆ ಸಂತೋಷ್ ಕುಮಾರ್ (40) ಎಂದು ಗುರುತಿಸಲಾಘಿದೆ.
ಸಂತೋಷ್ ಕುಮಾರ್ ಅವರು ಅ.24ರಂದು ಕುಳಾಯಿ ಗ್ರಾಮದಲ್ಲಿರುವ ತನ್ನ ನಾದಿನಿ ಶ್ವೇತಾ ಅವರ ಮನೆಯಲ್ಲಿ ನಡೆಯುತ್ತಿದ್ದ ಶ್ರೀ ದುರ್ಗಾ ನಮಸ್ಕಾರ ಪೂಜೆಗೆ ತನ್ನ ಹೆಂಡತಿ ಜಯಲತಾ ಮತ್ತು ಮಕ್ಕಳ ಜೊತೆ ಆಗಮಿಸಿದ್ದರು.
ರಾತ್ರಿ ಮಧ್ಯ ಸೇವಿಸಿ ತನ್ನ ಪತ್ನಿಯ ಜೊತೆ ಜಗಳವಾಡಿ ಮನೆಯಿಂದ ಹೋದವರು ಹಿಂದಿರುಗಿ ಬಂದಿಲ್ಲ ಎಂದು ಪತ್ನಿ ದೂರು ನೀಡಿದ್ದಾರೆ.
ನಾಪತ್ತೆಯಾಗಿರುವ ಸಂತೋಷ್ ಕುಮಾರ್ ಅವರ ಚಹರೆ, 5.6 ಅಡಿ ಎತ್ತರ, ಧೃಡಕಾಯ ಶರೀರ, ಗೋಧಿ ವರ್ಣ, ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಕೆಂಪುಗೆರೆ ಇರುವ ಅರ್ಧ ತೋಳಿನ ಅಂಗಿ, ಕೇಸರಿ ಬಣ್ಣದ ಲುಂಗಿ ಧರಿಸಿರುತ್ತಾರೆ. ಇವರು ಕನ್ನಡ, ಹಿಂದಿ, ತುಳು ಭಾಷೆ ಬಲ್ಲವರಾಗಿದ್ದಾರೆ.
Next Story