ಸುರತ್ಕಲ್: ಧಾರಾಕಾರ ಮಳೆ; ಜನ, ವಾಹನ ಸಂಚಾರ ಅಸ್ತವ್ಯಸ್ತ

ಸುರತ್ಕಲ್: ಇಲ್ಲಿನ ಪೇಟೆಯಲ್ಲಿ ಏಕಾಏಕಿ ಸುರಿದ ಧಾರಾಕಾರ ಮಳೆಯಿಂದಾಗಿ ಜನ ಸಂಚಾರ, ವಾಹನ ಸಂಚಾರ ಅಸ್ತವ್ಯಸ್ತ ಗೊಂಡಿತು.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಭಾರಿ ಮಳೆಗೆ ನೀರು ರಸ್ತೆಯಲ್ಲೇ ಹರಿಯುತ್ತಿತ್ತು. ಇದರಿಂದಾಗಿ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ತೊಡಕುಂಟಾಯಿತು.
ಮಳೆರಾಯನ ಆಗಮನವನ್ನು ನಿರೀಕ್ಷಿಸದಿದ್ದ ಸಾರ್ವಜನಿಕರು, ಮಳೆಯಿಂದ ರಕ್ಷಣೆ ಪಡೆಯಲು ಎಲ್ಲೆಂದರಲ್ಲಿ ಅಡಗಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
Next Story