ಫಿಫಾ ವಿಶ್ವಕಪ್: ಜಪಾನ್‌ಗೆ ಸೋಲುಣಿಸಿದ ಕೋಸ್ಟರಿಕ

ದೋಹಾ, ನ.27: ಕೋಸ್ಟರಿಕ ತಂಡ ಜಪಾನ್ ವಿರುದ್ಧ ರವಿವಾರ ನಡೆದ ಫಿಫಾ ವಿಶ್ವಕಪ್‌ನ ಗ್ರೂಪ್ ಇ ಪಂದ್ಯದಲ್ಲಿ 1-0 ಗೋಲುಗಳ ಅಂತರದಿಂದ ರೋಚಕ ಜಯ ದಾಖಲಿಸಿದೆ.
ಅಹ್ಮದ್ ಬಿನ್ ಅಲಿ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲಾರ್ಧದಲ್ಲಿ ಎರಡೂ ತಂಡಗಳು ಗೋಲು ಗಳಿಸಲು ವಿಫಲವಾಗಿದ್ದವು. ದ್ವಿತೀಯಾರ್ಧದ 81ನೇ ನಿಮಿಷದಲ್ಲಿ ಕೀಶೆರ್ ಫುಲ್ಲರ್ ಗೋಲು ಗಳಿಸಿ ಕೋಸ್ಟರಿಕಕ್ಕೆ ರೋಚಕ ಗೆಲುವು ತಂದುಕೊಟ್ಟರು.
ಸ್ಪೇನ್ ವಿರುದ್ಧ ತಾನಾಡಿದ ಮೊದಲ ಪಂದ್ಯದಲ್ಲಿ 7-0 ಅಂತರದಿಂದ ಸೋತಿದ್ದ ಕೋಸ್ಟರಿಕಕ್ಕೆ ಈ ಗೆಲುವು ಹೊಸ ಹುಮ್ಮಸ್ಸು ತಂದಿದೆ.
ತನ್ನ ಮೊದಲ ಪಂದ್ಯದಲ್ಲಿ ಜರ್ಮನಿಗೆ ಆಘಾತಕಾರಿ ಸೋಲುಣಿಸಿದ್ದ ಜಪಾನ್ ಇಂದು ಸೋಲುಂಡಿದೆ.
Next Story