ಸುರತ್ಕಲ್ ಟೋಲ್‌ಗೇಟ್ ವಿರುದ್ಧದ ಹೋರಾಟಕ್ಕೆ ಮುಂದುವರಿದ ಜನಬೆಂಬಲ

ಮಂಗಳೂರು: ಸುರತ್ಕಲ್ ಟೋಲ್‌ಗೇಟ್ ವಿರುದ್ಧ ಹೋರಾಟ ಸಮಿತಿಯು ನಡೆಸುತ್ತಿರುವ ಆಹೋರಾತ್ರಿ ಧರಣಿಗೆ ಜನಬೆಂಬಲ ಮುಂದುವರಿದಿದೆ.
ಕಳೆದ ಆರೇಳು ವರ್ಷದಿಂದ ನಡೆಯುತ್ತಿರುವ ಹೋರಾಟದ ಉದ್ದೇಶ ಈಡೇರದ ಹೊರತು ಧರಣಿ ಹಿಂಪಡೆಯುವ ಪ್ರಶ್ನೆಯೇ ಇಲ್ಲ ನಿರ್ಧರಿಸಿರುವ ಹೋರಾಟ ಸಮಿತಿಯ ಮುಖಂಡರು ಸಂಸದರ ಹೇಳಿಕೆ, ಜಿಲ್ಲಾಧಿಕಾರಿಯ ಸೂಚನೆ, ಎನ್‌ಎಚ್‌ಎಐ ಅಧಿಕಾರಿಗಳ ಸುತ್ತೋಲೆಯ ಹೊರತಾಗಿಯೂ ಟೋಲ್‌ಗೇಟ್ ತೆರವುಗೊಳಿಸದೆ ವಿರಮಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ರವಿವಾರ ನಡೆದ ಧರಣಿಯಲ್ಲಿ ಹೊಸಬೆಟ್ಟು ಮೊಗವೀರ ಸಂಘದ ಅಧ್ಯಕ್ಷ ಗಂಗಾಧರ ಹೊಸಬೆಟ್ಟು, ಮೊಗವೀರ ಸಭಾ ಗುರಿಕಾರ ಗಂಗಾಧರ ಕರ್ಕೇರ, ಮಾಜಿ ಮೇಯರ್ ಅಶ್ರಫ್, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಸಾಮಾಜಿಕ ಹೋರಾಟಗಾರರಾದ ಎಂಜಿ.ಹೆಗ್ಡೆ, ವೈ ರಾಘವೇಂದ್ರ ರಾವ್, ದಲಿತ ಸಂಘಟನೆ ಗಳ ಮುಖಂಡರಾದ ಶೇಖರ ಹೆಜಮಾಡಿ, ರಘು ಎಕ್ಕಾರು, ಸಾಮಾಜಿಕ ಕಾರ್ಯಕರ್ತರಾದ ಮಂಜುಳಾ ನಾಯಕ್, ಮನ್ಸೂರ್ ಸಾಗ್, ಹೇಮಂತ ಪೂಜಾರಿ, ರಾಜೇಶ್ ಪೂಜಾರಿ ಕುಳಾಯಿ, ಸುರತ್ಕಲ್ ಕೇಂದ್ರ ಜಮಾ ಮಸೀದಿಯ ಖತೀಬ್ ಹಾಫಿಝ್ ಸುಲೈಮಾನ್, ಆನಂದ ಅಮೀನ್, ಹಸನಬ್ಬ ಮಂಗಳಪೇಟೆ, ಎನ್.ಇ. ಮುಹಮ್ಮದ್, ಹುಸೈನ್ ಕಾಟಿಪಳ್ಳ ಮತ್ತಿತರರು ಹೋರಾಟ ಸಮಿತಿಯ ಮುಖಂಡರಾದ ಮುನೀರ್ ಕಾಟಿಪಳ್ಳ ಮತ್ತು ದಿನೇಶ್ ಹೆಗ್ಡೆ ಉಳೆಪಾಡಿಗೆ ಸಾಥ್ ನೀಡಿದರು.
