ಫೆ.13ರಿಂದ ಬೆಂಗಳೂರಿನಲ್ಲಿ ಐದು ದಿನಗಳ ಕಾಲ ‘ಏರ್ ಶೋ’
ಬೆಂಗಳೂರು, ನ. 25: ‘ಏರೋ ಇಂಡಿಯಾ’ದ ಬಹುನಿರೀಕ್ಷೆಯ ‘ಏರ್ ಶೋ’ 2023ರ ಫೆಬ್ರವರಿ 13ರಿಂದ 17ರ ವರೆಗೆ ಒಟ್ಟು ಐದು ದಿನಗಳ ಕಾಲ ಬೆಂಗಳೂರಿನ ಯಲಹಂಕದ ವಾಯುಪಡೆ ನಡೆಸಲಾಗುವುದು ಎಂದು ರಕ್ಷಣಾ ಇಲಾಖೆ ಪ್ರಕಟಿಸಿದೆ.
ಬೆಂಗಳೂರಿನ ಯಲಹಂಕದ ಏರ್ಪೋರ್ಸ್ ಸ್ಟೇಷನ್ನಲ್ಲಿ ಏಷ್ಯಾದ ಅತಿದೊಡ್ಡ ‘ಏರ್ ಶೋ’(ವೈಮಾನಿಕ ಪ್ರದರ್ಶನ) ಆತಿಥ್ಯ ವಹಿಸಿದೆ. 14ನೆ ಏರೋ ಇಂಡಿಯಾ ಶೋ ನಡೆಯಲಿದ್ದು, ಇದರಲ್ಲಿ ದೇಶ-ವಿದೇಶಗಳ ರಕ್ಷಣಾ ಪಡೆಯ ವಿಮಾನಗಳು ಪ್ರದರ್ಶನ ನೀಡಲಿವೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.
Next Story