ಶಿಬರೂರು: ದ.ಕ. ಜಿಲ್ಲಾ ಮಟ್ಟದ ಯುವಜನೋತ್ಸವ

ಮಂಗಳೂರು : ದ.ಕ. ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವಜನ ಒಕ್ಕೂಟ, ಸೂರಿಂಜೆ ಗ್ರಾಪಂ, ದೇಲಂತಬೆಟ್ಟು ಯುವಕ ಮತ್ತು ಯುವತಿ ಮಂಡಲದ ಸಂಯುಕ್ತಾಶ್ರಯದಲ್ಲಿ ದ.ಕ.ಜಿಲ್ಲಾ ಮಟ್ಟದ ಯುವ ಜನೋತ್ಸವವು ರವಿವಾರ ಶಿಬರೂರಿನ ಪದ್ಮಾವತಿ ಕಲಾ ಮಂದಿರದಲ್ಲಿ ನಡೆಯಿತು.
ಶಾಸಕ ಉಮಾನಾಥ ಕೋಟ್ಯಾನ್ ಯುವಜನೋತ್ಸವ ಉದ್ಘಾಟಿಸಿದರು. ಸೂರಿಂಜೆ ಗ್ರಾಪಂ ಅಧ್ಯಕ್ಷ ಜೀತೆಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕೊಡಮಣಿತ್ತಾಯ ದೈವಸ್ಥಾನದ ಅನುವಂಶಿಕ ಮೊಕ್ತೇಸರ ವಾಸುದೇವ ಶಿಬರಾಯ, ತಿಬಾರ್ ಗುತ್ತಿನಾರ್ ಉಮೇಶ್ ಎನ್. ಶೆಟ್ಟಿ, ಪ್ರದ್ಮುನ್ನರಾವ್ ಶಿಬರೂರು, ಮೋನಪ್ಪ ಶೆಟ್ಟಿ ಎಕ್ಕಾರು, ಉದ್ಯಮಿ ತುಕರಾಮ ಶೆಟ್ಟಿ ಪರ್ಲಬೈಲು, ದಯಾನಂದ ದೇವಾಡಿಗ ದೇಲಂತಬೆಟ್ಟು, ತುಳು ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್, ಯುವಜನ ಒಕ್ಕೂಟ ಮಂಗಳೂರು ಅಧ್ಯಕ್ಷ ಸುಧಾಕರ ಆರ್. ಅಮೀನ್, ದೇಲಂತಬೆಟ್ಟು ಯುವಕ ಮಂಡಲದ ಅದ್ಯಕ್ಷ ಗಿರೀಶ್ ಶೆಟ್ಟಿ, ಯುವತಿ ಮಂಡಲದ ಅಧ್ಯಕ್ಷೆ ಸುಪ್ರಜಾ ಸುಬ್ರಹ್ಮಣ್ಯ ಪ್ರಸಾದ್ ಉಪಸ್ಥಿತರಿದ್ದರು.