ಸಮಸ್ತ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್: ಪದಾಧಿಕಾರಿಗಳ ಆಯ್ಕೆ

ದೇರಳಕಟ್ಟೆ: ಸಮಸ್ತ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ದೇರಳಕಟ್ಟೆ ರೇಂಜ್ ಇದರ ವಾರ್ಷಿಕ ಸಭೆಯು ದೇರಳಕಟ್ಟೆ ಮದರಸದಲ್ಲಿ ದೇರಳಕಟ್ಟೆ ರೇಂಜ್ ಜಂ-ಇಯ್ಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬ್ದುರ್ರಹ್ಮಾನ್ ಫೈಝಿ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಮುಂದಿನ ಮೂರು ವರ್ಷದ ಅವಧಿಗೆ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಹಾಜಿ ಅಬೂಬಕ್ಕರ್ ನಾಟೆಕ್ಕಲ್, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎಂ ಶರೀಫ್ ಪಟ್ಟೋರಿ, ಕೋಶಾಧಿಕಾರಿಯಾಗಿ ಮೊಹಮ್ಮದ್ ಮೋನು ಇನೋಳಿ, ಉಪಾಧ್ಯಕ್ಷರಗಳಾಗಿ ಹಾಜಿ ಅಹ್ಮದ್ ಸಿರಾಜುದ್ದೀನ್ ತಾಜ್, ಮೊಹಮ್ಮದ್ ಮುಸ್ತಫಾ ಹರೇಕಳ, ವರ್ಕಿಂಗ್ ಕಾರ್ಯದರ್ಶಿಯಾಗಿ ಸಯ್ಯದ್ ಅಲಿ ಗ್ರೀನ್ ಗ್ರೌಂಡ್, ಜೊತೆ ಕಾರ್ಯದರ್ಶಿಗಳಾಗಿ ಹನೀಫ್ ದಾರಿಮಿ ಗ್ರಾಮಚಾವಡಿ, ಅಹ್ಮದ್ ಶಫೀಕ್ ಅರ್ಕಾಣ, ಪತ್ರಿಕಾ ಕಾರ್ಯದರ್ಶಿಯಾಗಿ ಇರ್ಷಾದ್ ಮಜಲ್ ತೋಟ ಹಾಗೂ ಜಿಲ್ಲಾ ಕೌನ್ಸಿಲರ್ ಗಳಾಗಿ ಹಾಜಿ ಅಬೂಬಕ್ಕರ್ ಸ್ವಾಗತ್, ಮೊಹಮ್ಮದ್ ಪನೀರ್ ಆಯ್ಕೆಯಾದರು.
ಸಭೆಯಲ್ಲಿ ದೇರಳಕಟ್ಟೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾದ ಆರ್.ಅಹ್ಮದ್ ಶೇಟ್. ಕಿನ್ಯ ರೇಂಜ್ ಜಂ-ಇಯ್ಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಅಬ್ದುಲ್ ಲತೀಫ್ ದಾರಿಮಿ, ದೇರಳಕಟ್ಟೆ ರೇಂಜ್ ಜಂ-ಇಯ್ಯತ್ತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ದಾರಿಮಿ, ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಜಿಲ್ಲಾ ಸಮಿತಿ ಪ್ರತಿನಿಧಿಗಳಾದ ಇಬ್ರಾಹಿಂ ಕೊಣಾಜೆ, ಅಶ್ರಫ್ ಮರಾಠಿಮೂಲೆ, ಹನೀಫ್ ಎಸ್.ಬಿ. ಮೊದಲಾದವರು ಉಪಸ್ಥಿತರಿದ್ದರು.