ಆಟದ ನಡುವೆ ಗೋಲ್‌ಕೀಪರ್ ಮೇಲೆ ಅಭಿಮಾನಿಯಿಂದ ದಾಳಿ: ಫುಟ್‌ಬಾಲ್ ಪಂದ್ಯಾಟ ಮುಂದೂಡಿಕೆ
ಅಂಕಾರ: ಪಂದ್ಯಾಟದ ನಡುವೆ ಗೋಲ್‌ಕೀಪರ್‌ಗೆ ಪ್ರತಿಸ್ಪರ್ಧಿ ತಂಡದ ಅಭಿಮಾನಿಯೊಬ್ಬ ಕೋಲಿನಿಂದ ಹೊಡೆದಿದ್ದರಿಂದ ಗೊಜ್ಟೆಪೆ (Göztepe) ಮತ್ತು ಅಲ್ಟೇ (Altay) ನಡುವಿನ ಆಟವನ್ನು ಮುಂದೂಡಲಾಗಿದೆ. ಅಭಿಮಾನಿಯೊಬ್ಬ ಧ್ವಜದ ಕೋಲನ್ನು ಹಿಡಿದು ಏಕಾಏಕಿ ಕ್ರೀಡಾಂಗಣವನ್ನು ಪ್ರವೇಶಿಸಿದ್ದು, ಕಾರ್ನರ್ ನಲ್ಲಿ ನಿಂತಿದ್ದ ಗೋಲ್‌ಕೀಪರ್ ಓಜಾನ್ ಎವ್ರಿಮ್ ಓಜೆಂಕ್ ಮೇಲೆ ಏಕಾಏಕಿ ದಾಳಿ ನಡೆಸಿದ್ದಾನೆ. ದಾಳಿಕೋರನನ್ನು ತಕ್ಷಣವೇ ಅಲ್ಲಿದ್ದವರು ತಡೆದಿದ್ದು, ಗಾಯಗೊಂಡ ಗೋಲ್ ಕೀಪರ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ದಾಳಿಯಲ್ಲಿ ಅಲ್ಟೇ ತಂಡದ ಗೋಲ್ಕೀಪರ್ ಆಗಿರುವ ಓಜಾನ್ ಎವ್ರಿಮ್ ಓಝೆನ್ಕ್ ಅವರಿಗೆ ಗಂಭೀರ ಗಾಯವಾಗಿದೆ ಎಂದು ಪತ್ರಕರ್ತ ಗುರುಬಕ್ಷ್ ಸಿಂಗ್ ಚಾಹಲ್ ಟ್ವೀಟ್ ಮಾಡಿದ್ದಾರೆ.
ದಾಳಿಕೋರನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
WATCH: #BNNTurkey Reports
— Gurbaksh Singh Chahal (@gchahal) November 27, 2022
The football match between Göztepe (@Goztepe) and Altay (@AltaySporKulubu) was interrupted after a fan attacked Altay goalkeeper Ozan Evrim Özenç with a stick. pic.twitter.com/2lm3pBdCWz