Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ ..

ಓ ಮೆಣಸೇ ..

ಪಿ.ಎ. ರೈಪಿ.ಎ. ರೈ28 Nov 2022 12:05 AM IST
share
ಓ ಮೆಣಸೇ ..

ಶಿಕ್ಷಣದಲ್ಲಿ ವಿದ್ಯಾರ್ಥಿಗಳನ್ನು ಪ್ರಾಡಕ್ಟ್ ಮಾದರಿಯಲ್ಲಿ ರೂಪಿಸುವುದು ಸರಿಯಲ್ಲ- ಬಿ.ಸಿ.ನಾಗೇಶ್, ಸಚಿವ
ಪ್ರಾಡಕ್ಟ್ ಮಾದರಿಯಲ್ಲಿ ರೂಪಿಸಿದರೆ ಅವರನ್ನು ಹಿಂಸೆ, ಗಲಭೆ ಇತ್ಯಾದಿಗಳಿಗಾಗಿ ಬಳಸಲು ಸಾಧ್ಯವಾಗುವುದಿಲ್ಲವೇ?

ಕೊಲ್ಲಲು, ಕದಿಯಲು, ನಾಶ ಮಾಡಲು ಸಾಧ್ಯವಾಗದೇ ಇರುವ ಒಂದೇ ಆಸ್ತಿ ಜ್ಞಾನ- ಸುಧಾಮೂರ್ತಿ, ಸಂಸ್ಥಾಪಕರು ಇನ್ಫಿ ಫೌಂಡೇಶನ್
  ಹಿಂದೊಮ್ಮೆ ಅಂತಹ ನಂಬಿಕೆಯೊಂದು ಇದ್ದದ್ದು ನಿಜ. ಆದರೆ ನಿಮಗೆ ತುಂಬಾ ಬೇಕಾದ ಕೆಲವರು ಜ್ಞಾನವನ್ನು ಬೇಕಾಬಿಟ್ಟಿ ತಿರುಚಿ, ವಿಂಗಡನೆ ಮತ್ತು ವಿಭಜನೆಯ ಅಸ್ತ್ರವಾಗಿ ಬಳಸಿಕೊಂಡ ಬಳಿಕ ಆ ನಂಬಿಕೆ ಧ್ವಂಸವಾಗಿದೆ.

ಬಿಜೆಪಿ ನಾಯಕರು ನನ್ನನ್ನು ಮಂತ್ರಿ ಮಾಡಲಿ, ಬಿಡಲಿ ನಾನಂತೂ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ- ರಮೇಶ್ ಜಾರಕಿಹೊಳಿ, ಶಾಸಕ
ಅನುಭವಸ್ಥರು ಇಂತಹ ಹೇಳಿಕೆಗಳನ್ನು ಪಕ್ಷ ಬಿಟ್ಟೋಡುವುದಕ್ಕೆ ಮುನ್ನುಡಿಯಾಗಿ ಪರಿಗಣಿಸುತ್ತಾರೆ.

ಯಾವುದೇ ದೇಶವು ಏಕಾಂಗಿಯಾಗಿ ಭಯೋತ್ಪಾದನೆಯನ್ನು ತಡೆಯಲು ಸಾಧ್ಯವಿಲ್ಲ- ಅಮಿತ್ ಶಾ, ಕೇಂದ್ರ ಸಚಿವ
ಆದರೆ ಅದಕ್ಕಾಗಿ ದೇಶದ ಒಂದು ದೊಡ್ಡ ಭಾಗವನ್ನು ಚೀನಾದವರಿಗೆ ಬಿಟ್ಟುಕೊಡಬೇಕಾಗಿಲ್ಲ.

ತಮಿಳಿನ ಪರಂಪರೆಯನ್ನು ಉಳಿಸಿ ಬೆಳೆಸುವುದು 130 ಕೋಟಿ ಭಾರತೀಯರ ಜವಾಬ್ದಾರಿಯಾಗಿದೆ- ನರೇಂದ್ರ ಮೋದಿ, ಪ್ರಧಾನಿ
ಇದಕ್ಕೆ ಬದಲಾಗಿ ಯಾರದೂ ಅಲ್ಲದ ಸಂಸ್ಕೃತವನ್ನು ಉಳಿಸಿ ಬೆಳೆಸಲು ತಮಿಳರು ಒಪ್ಪುತ್ತಾರೆಯೇ?

ಭಾರತ ಯಶಸ್ವಿ ರಾಷ್ಟ್ರ ಆಗಬೇಕಾದರೆ ದಾಸ್ಯದ ಕುರುಹುಗಳನ್ನು ಅಳಿಸಿ ಹಾಕಬೇಕು- ಡಿ.ವಿ.ಸದಾನಂದ ಗೌಡ, ಸಂಸದ
ದಾಸ್ಯ ಹೇರಿದವರನ್ನು ದಾಸ್ಯದ ಕುರುಹುಗಳೆಂದು ಕರೆಯುತ್ತೀರಾ?

ನಿಜವಾದ ಸಾಧಕರ ಬದಲು ಸಮಯ ಸಾಧಕರೇ ಪ್ರಶಸ್ತಿಗಳಿಗೆ ಅರ್ಹರಾಗುವ ಕಾಲವಿದು- ಮಹೇಶ್ ಜೋಷಿ, ಕಸಾಪ ಅಧ್ಯಕ್ಷ
ಈ ಮಾತು ಪರಿಷತ್ ಅಧ್ಯಕ್ಷ ಸ್ಥಾನಕ್ಕೂ ಅನ್ವಯಿಸುವುದಿಲ್ಲವೇ?

 ಮುಂದೊಂದು ದಿನ ಶ್ರೀರಾಮುಲು ಮುಖ್ಯಮಂತ್ರಿಯಾಗುವ ಕಾಲ ಬರುತ್ತೆ- ಬಸವರಾಜ ಬೊಮ್ಮಾಯಿ, ಸಿಎಂ
ನೀವು ಮುಖ್ಯಮಂತ್ರಿಯಾದಾಗಲೇ ಜನತೆಗೆ ಆ ತರದ ಭಯ ಉಂಟಾಗಿತ್ತು.

ಮುಂದಿನ ವಿಧಾನ ಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸುವ ಹಕ್ಕು ಖರ್ಗೆ ಮತ್ತು ಹೈಕಮಾಂಡ್‌ಗೆ ಮಾತ್ರ ಇದೆ- ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ನಿಮ್ಮ ಕೆಲಸ ಪಟ್ಟಿ ತಯಾರಿಸಿ ಅವರ ಕೈಗೆ ಕೊಟ್ಟು 'ಇದನ್ನೊಮ್ಮೆ ಜೋರಾಗಿ ಓದಿ ಬಿಡಿ' ಎಂದು ಆದೇಶಿಸುವುದು ಮಾತ್ರವೇ?

ಜೆಡಿಎಸ್‌ನಲ್ಲಿ ಎಚ್.ಡಿ.ಕುಮಾರ ಸ್ವಾಮಿ ಬಳಿಕ ನಾನೇ ಸಿಎಂ ಅಭ್ಯರ್ಥಿ- ಸಿ.ಎಂ.ಇಬ್ರಾಹೀಂ, ಜೆಡಿಎಸ್ ಅಧ್ಯಕ್ಷ
ನೀವು ಹೀಗೆಲ್ಲಾ ಹೇಳಿ ಜನರಿಗೆ ಬೆದರಿಕೆ ಒಡ್ಡಿದರೆ ಅವರೆಲ್ಲಾ ಸೇರಿ ಕುಮಾರ ಸ್ವಾಮಿಯ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಲಾರಂಭಿಸುತ್ತಾರೆ.

ಭಯೋತ್ಪಾದನೆಯ ಮೂಲವನ್ನು ಹುಡುಕುವ ಕೆಲಸವಾಗಬೇಕು- ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಮುಂದಾಳು
ನಿಮ್ಮನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ಹೇಗೆ?

ಬಿಜೆಪಿಗೆ ಸಂಘಟನಾತ್ಮಕ ಶಕ್ತಿ ತುಂಬುವಲ್ಲಿ ಉಡುಪಿಗೆ ಐತಿಹಾಸಿಕ ಹಿನ್ನೆಲೆ ಇದೆ -ರಘುಪತಿ ಭಟ್, ಶಾಸಕ
  ಕೋಮು ಧ್ರುವೀಕರಣವನ್ನೇ ತನ್ನ ಸಂಘಟನಾ ಶಕ್ತಿಯಾಗಿಸಿಕೊಂಡ ಪಕ್ಷಕ್ಕೆ, ಧ್ರುವೀಕರಣದಲ್ಲಿ ತಜ್ಞರಾಗಿರುವ ನಿಮ್ಮ ಬಳಗದ ಕೊಡುಗೆ ನಿಜಕ್ಕೂ ಗಣ್ಯ.

ಕಾಂಗ್ರೆಸ್‌ನವರ ಸುಳ್ಳಿನ ವಿರುದ್ಧ ಜನರಿಗೆ ಸತ್ಯವನ್ನು ತಿಳಿಸುವ ಕೆಲಸ ಇಂದಿನ ಅಗತ್ಯ - ತೇಜಸ್ವಿ ಸೂರ್ಯ, ಸಂಸದ
ಅದ್ಕಕಾಗಿ ನೀವು ಜೀವನದಲ್ಲಿ ಒಂದೆರಡು ಬಾರಿಯಾದರೂ ಸತ್ಯ ಹೇಳಿ ಹೊಸ ಅನುಭವ ಪಡೆದುಕೊಳ್ಳಬೇಕಾಗುತ್ತದೆ.

ಸರ್ವ ಧರ್ಮಗಳ ಸಾರವೂ ಒಂದೇ ಆಗಿದ್ದು ನಾವು ಎಲ್ಲ ಧರ್ಮಗಳನ್ನು ಸಮಾನವಾಗಿ ಗೌರವಿಸಬೇಕು, ಪ್ರೀತಿಸಬೇಕು - ಸ್ಮತಿ ಇರಾನಿ, ಕೇಂದ್ರ ಸಚಿವೆ
ಸಿಲಿಂಡರ್ ಕುರಿತಾದ ನಿಮ್ಮ ಮಾತನ್ನೇ ಲೇವಡಿ ಮಾಡುವ ಜನತೆ ಧರ್ಮದ ವಿಷಯದಲ್ಲಿ ನಿಮ್ಮ ಮಾತಿಗೆ ಯಾವ ಬೆಲೆ ಕೊಡುತ್ತಾರೆ?

ಗುಜರಾತ್‌ನಲ್ಲಿ ಬಿಜೆಪಿ - ಕಾಂಗ್ರೆಸ್ ನಡುವಿನ ಸಂಬಂಧ, ಮದುವೆಗೆ ಮುನ್ನ ರಹಸ್ಯವಾಗಿ ಭೇಟಿಯಾಗುವ ಹುಡುಗ -ಹುಡುಗಿಯಂತಿದೆ - ಅರವಿಂದ ಕ್ರೇಜಿವಾಲ್, ದಿಲ್ಲಿ ಸಿಎಂ
ನಿಮ್ಮ ಪಕ್ಷ ಈಗಾಗಲೇ ಬಿಜೆಪಿಯನ್ನು ವರಿಸಿ ಹಲವು ಮಕ್ಕಳನ್ನು ಹಡೆದಿರುವಂತೆ ವರ್ತಿಸುವುದೇಕೆ?

'ದಿ ಕಾಶ್ಮೀರ್ ಫೈಲ್ಸ್' ಸಿನೆಮಾದಿಂದ ಕಾಶ್ಮೀರಿ ಪಂಡಿತರ ಮೇಲಾದ ದೌರ್ಜನ್ಯ ಜಗತ್ತಿಗೇ ತಿಳಿಯುವಂತಾಯಿತು - ಅನುಪಮ್ ಖೇರ್, ನಟ
ಜೊತೆಗೆ ನಿಮ್ಮ ಬಿಳಿ ಚರ್ಮದ ಹಿಂದೆ ಅವಿತಿದ್ದ ಕರಾಳ ಮಾನಸಿಕತೆ ಕೂಡಾ ಬಯಲಾಯಿತು.

2047ರ ವೇಳೆಗೆ ಆರ್ಥಿಕತೆಯಲ್ಲಿ ಭಾರತ ವಿಶ್ವದ ಟಾಪ್ 3ನೇ ಸ್ಥಾನಕ್ಕೆ ಏರಲಿದೆ - ಮುಕೇಶ್ ಅಂಬಾನಿ, ಉದ್ಯಮಿ
ಅದಕ್ಕೆ ಮುನ್ನ ಇಡೀ ದೇಶವನ್ನು ಖಾಸಗೀಕರಿಸಿ ವಶಪಡಿಸಿಕೊಳ್ಳುವ ತಯಾರಿಯಲ್ಲಿದ್ದೀರಾ?

ಎಸ್.ಸಿ, ಎಸ್.ಟಿ ಪಂಗಡಕ್ಕೆ ಮೀಸಲಾತಿ ತಂದುಕೊಟ್ಟ ಗಂಡೆದೆಯ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ - ಯಡಿಯೂರಪ್ಪ, ಮಾಜಿ ಸಿಎಂ
ಆದ್ದರಿಂದ ಅಂಬೇಡ್ಕರ್ ಚಿತ್ರ, ವಿಗ್ರಹ ಇತ್ಯಾದಿಗಳನ್ನೆಲ್ಲ ಕಿತ್ತೆಸೆದು ಆ ಜಾಗಗಳಲ್ಲಿ ಬೊಮ್ಮಾಯಿ ಚಿತ್ರ, ವಿಗ್ರಹ ಇತ್ಯಾದಿಗಳನ್ನು ಸ್ಥಾಪಿಸೋಣವೇ?

ದೇಶದೊಳಗೆ ಇರುವ ಕಾರಣಕ್ಕೆ ಬೆಳಗಾವಿ ಪ್ರದೇಶಗಳು ಸುರಕ್ಷಿತವಾಗಿವೆ -ಸಿ.ಟಿ.ರವಿ ಶಾಸಕ
ಇಲ್ಲೂ ವಿದೇಶಿ ಕೈವಾಡಕ್ಕೆ ಆಸ್ಪದ ಕಾಣುತ್ತಿದ್ದೀರೇನು?

ಮದುವೆ ಯಾಕೆ ಆಗಬೇಕೆಂದು ನನಗೆ ಅರ್ಥವಾಗುತ್ತಿಲ್ಲ - ರಮ್ಯ, ನಟಿ
ನಮ್ಮ ಸುತ್ತ ಮುತ್ತ ಇರುವ ದನ, ನಾಯಿ, ಹಂದಿ ಇತ್ಯಾದಿಗಳಲ್ಲಿ ನಮಗೆ ಸಾಕಷ್ಟು ಮಾದರಿ ಇದೆ.

ಪ್ರಧಾನಿ ಮೋದಿಯಂತಹ ಪ್ರಭಾವಿ, ಬಲಶಾಲಿ ನಾಯಕರಿಲ್ಲದೇ ಹೋಗಿದ್ದರೆ ದೇಶದ ಪ್ರತೀ ನಗರದಲ್ಲಿ ಅಫ್ತಾಬ್‌ನಂತಹ ಕಿರಾತಕರು ಸೃಷ್ಟಿಯಾಗುತ್ತಿದ್ದರು- ಹಿಮಂತ ಬಿಸ್ವಾ ಶರ್ಮಾ, ಅಸ್ಸಾಂ ಸಿಎಂ
2002ರ ಗುಜರಾತ್ ನ ಕಿರಾತಕರು ನಮ್ಮ ಹೆಮ್ಮೆ ಎಂದು ಬಿಡುಗಡೆ ಮಾಡಿರುವುದು ಇದೇ ಕಾರಣಕ್ಕೆ ಇರಬಹುದೇ ?

ಪ್ರಧಾನಿ ಮೋದಿ ಆರೆಸ್ಸೆಸ್ ಸ್ವಯಂ ಸೇವಕ. ಆದರೆ ಸಂಘ ಅವರನ್ನು ನಿಯಂತ್ರಣ ಮಾಡುವುದಿಲ್ಲ- ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ
ಸೇವಕ ಎಂದು ನೀವೇ ಕರೆದ ಮೇಲೆ ಇನ್ನೇನು ಉಳಿಯಿತು ?

ಕೇದ್ರದ ಎನ್‌ಡಿಎ ಸರಕಾರವೇ ಈ ದೇಶದ ಅತ್ಯಂತ ದೊಡ್ಡ ವಸೂಲಾಗದ ಸಾಲ (ಎನ್‌ಪಿಎ) - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ
ಕಾಂಗ್ರೆಸ್ ಪಕ್ಷವೆನ್ನುವ ಬ್ಯಾಂಕ್ ದಿವಾಳಿ ಕೂತಿರುವುದು ಇದೇ ಕಾರಣಕ್ಕೆ ಇರಬಹುದು.

ದಿಲ್ಲಿಯಲ್ಲಿ ಯಮುನಾ ನದಿಯು ಆಪ್ ಪಕ್ಷದ ಪಾಪದಿಂದಾಗಿಯೇ ಮಲಿನವಾಗಿದೆ - ಮೀನಾಕ್ಷಿ ಲೇಖಿ , ಕೇಂದ್ರ ಸಚಿವೆ
ಗಂಗಾನದಿಯ ಮಾಲಿನ್ಯದ ಬಗ್ಗೆಯೂ ಹೇಳಿ.

2023ರ ವಿಧಾನ ಸಭೆ ಚುನಾವಣೆಗೆ ಕಾಂಗ್ರೆಸ್ ನಲ್ಲಿ ಕೇಳಿದರೆ ನಮ್ಮ ಕುಟುಂಬಕ್ಕೆ ನಾಲ್ಕು ಟಿಕೆಟ್ ಬೇಕಾದರೂ ಕೊಡುತ್ತಾರೆ- ಡಾ .ಶಾಮನೂರು ಶಿವಶಂಕರಪ್ಪ, ಶಾಸಕ
ಯಾವುದೋ ಡಬ್ಬಾ ಸಿನೆಮಾದ ಟಿಕೆಟ್ ಬಗ್ಗೆ ಹೇಳುತ್ತಿರಬೇಕು.

ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ದಲಿತರಿಗೆ ಡಿಸಿಎಂ ಹುದ್ದೆ ನೀಡಲಾಗುವುದು- ಕುಮಾರಸ್ವಾಮಿ, ಮಾಜಿ ಸಿಎಂ
ಜೆಡಿಎಸ್ ಕೇಂದ್ರದಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ಯಾರಿಗೆ ಏನು ಸಿಗುತ್ತೆ ಎಂಬುದನ್ನೂ ಘೋಷಿಸಿ. ಜನರಿಗೆ ಮನರಂಜನೆಯಾದರೂ ಸಿಗಲಿ.

ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಶೂಟೌಟ್ ಮಾಡುವವರೆಗೂ ಸಮಾಜ ಸುಧಾರಣೆ ಆಗುವುದಿಲ್ಲ -ಕೆ.ಎಸ್.ಈಶ್ವರಪ್ಪ, ಶಾಸಕ
ಹತಾಶೆಯಲ್ಲಿ ಆತ್ಮಾಹುತಿ ಕಾರ್ಯಾಚರಣೆಗೆ ರೆಡಿಯಾದಂತಿದೆಯಲ್ಲಾ!

ಸೂರ್ಯ-ಚಂದ್ರರಿರುವ ತನಕ ಶಿವಾಜಿ ಮಹಾರಾಷ್ಟ್ರದ ಮಾದರಿ ನಾಯಕರಾಗಿ ಉಳಿಯುತ್ತಾರೆ - ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ಡಿಸಿಎಂ
ಅಷ್ಟು ದೊಡ್ಡ ನಾಯಕನನ್ನು ಜುಜುಬಿ ಚುನಾವಣಾ ಪ್ರಚಾರಕ್ಕಾಗಿ ಬಳಸಿಕೊಳ್ಳುವಾಗ ನಾಚಿಕೆ ಆಗುವುದಿಲ್ಲವೇ?

share
ಪಿ.ಎ. ರೈ
ಪಿ.ಎ. ರೈ
Next Story
X