ಫಿಫಾ ವಿಶ್ವಕಪ್: ಸ್ಪೇನ್ ಜತೆ ಡ್ರಾ ಸಾಧಿಸಿದ ಜರ್ಮನಿ

ಹೊಸದಿಲ್ಲಿ: ಕತರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‍ನ ಇ ಗುಂಪಿನ ಪಂದ್ಯದಲ್ಲಿ ಅಗ್ರಸ್ಥಾನಿ ಸ್ಪೇನ್ ವಿರುದ್ಧ 1-1 ಗೋಲುಗಳ ಡ್ರಾ ಸಾಧಿಸಿದ ಜರ್ಮನಿ 16ರ ಘಟ್ಟದಲ್ಲಿ ಆಡುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಈ ಡ್ರಾದಿಂದ ನಾಲ್ಕು ಬಾರಿಯ ಚಾಂಪಿಯನ್ ತಂಡ, ಅನಿವಾರ್ಯವಾಗಿದ್ದ ಒಂದು ಅಂಕ ಗಳಿಸುವ ಮೂಲಕ ಕತರ್ ಕಣದಲ್ಲಿ ಮುಂದುವರಿಯುವ ಆಸೆ ಜೀವಂತವಾಗಿರಿಸಿಕೊಂಡಿದೆ. ಸ್ಪೇನ್ ನಾಲ್ಕು ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿದೆ.
62ನೇ ನಿಮಿಷದಲ್ಲಿ ಎದುರಾಳಿಗಳಿಗೆ ಗೋಲು ಬಿಟ್ಟುಕೊಟ್ಟ ಜರ್ಮನಿ ಕೊನೆಯ ಹಂತದವರೆಗೂ ತೊಂದರೆಗೆ ಸಿಲುಕಿತ್ತು. ಕೈಯಲ್ಲಿದ್ದ ಪಂದ್ಯವನ್ನು ಜರ್ಮನಿ ಸೋತಿದ್ದಲ್ಲಿ ಜರ್ಮನ್ನರ ಸವಾಲು ಗುಂಪು ಹಂತದ ಪಂದ್ಯದಲ್ಲೇ ಅಂತ್ಯವಾಗುತ್ತಿತ್ತು. ಆದರೆ ಬದಲಿ ಆಟಗಾರ ನಿಕ್ಲಾಸ್ ಫ್ಯೂಲ್ಕ್‍ಬರ್ಗ್ ಪಂದ್ಯ ಕೊನೆಗೊಳ್ಳಲು ಏಳು ನಿಮಿಷ ಇದ್ದಾಗ ಗೋಲು ಗಳಿಸಿ ತಂಡದ ಸೋಲು ತಪ್ಪಿಸಿದರು. ಆಟ ಮುಗಿಯುವ ವೇಳೆಗೆ ಕೊನೆಕ್ಷಣದ ಗೋಲು ಬಾರಿಸುವ ಪ್ರಯತ್ನ ನಡೆಸಿದರೂ ಅದನ್ನು ತಡೆದ ಸ್ಪೇನ್ ಒಂದು ಅಂಕ ಗಳಿಸುವಲ್ಲಿ ಯಶಸ್ವಿಯಾಯಿತು.
ನಾಕೌಟ್ ಹಂತಕ್ಕೇರಲು ಸ್ಪೇನ್‍ಗೆ ತನ್ನ ಕೊನೆಯ ಪಂದ್ಯದಲ್ಲಿ ಜಪಾನ್ ವಿರುದ್ಧ ಒಂದು ಅಂಕ ಪಡೆದರೂ ಸಾಕು. ರವಿವಾರ ಕೋಸ್ಟರಿಕಾ ವಿರುದ್ಧ ಸೋಲು ಅನುಭವಿಸಿದ ಜಪಾನ್ ಮೂರು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಕೋಸ್ಟರಿಕ ಕೂಡಾ ಮೂರು ಅಂಕ ಹೊಂದಿದ್ದರೂ, ಗೋಲು ಅಂತರದಲ್ಲಿ ಜಪಾನ್‍ಗೆ ಎರಡನೇ ಸ್ಥಾನ ಬಿಟ್ಟುಕೊಟ್ಟು ಮೂರನೇ ಸ್ಥಾನದಲ್ಲಿದೆ. ಜಪಾನ್ ಕೊನೆಯ ಪಂದ್ಯವನ್ನು ಸೋತಲ್ಲಿ ಸ್ಪೇನ್ ಜತೆಗೆ ಮುಂದಿನ ಹಂತಕ್ಕೆ ಮುನ್ನಡೆಯುವ ಅವಕಾಶವನ್ನು ಜರ್ಮನಿ ಪಡೆಯಲಿದೆ. ಆದರೆ ಜಪಾನ್ ಡ್ರಾ ಸಾಧಿಸಿದಲ್ಲಿ ಅಥವಾ ಸ್ಪೇನ್ ಕೊನೆಯ ಪಂದ್ಯ ಸೋತಲ್ಲಿ ಆಗ ಗೋಲು ಅಂತರ/ಗಳಿಸಿದ ಗೋಲುಗಳ ಆಧಾರದಲ್ಲಿ ತಂಡಗಳು ಮುನ್ನಡೆಯಬೇಕಾಗುತ್ತದೆ.
An exciting one ends in points shared. @adidasfootball | #FIFAWorldCup
— FIFA World Cup (@FIFAWorldCup) November 27, 2022
Spain are on of Group E. Which two sides will advance?#FIFAWorldCup | #Qatar2022
— FIFA World Cup (@FIFAWorldCup) November 27, 2022
.jpg)
.jpg)