Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಮಂಗಳ ಆಸ್ಪತ್ರೆಯಲ್ಲಿ ನ್ಯೂರೊ, ಇಎನ್‌ಟಿ...

ಮಂಗಳ ಆಸ್ಪತ್ರೆಯಲ್ಲಿ ನ್ಯೂರೊ, ಇಎನ್‌ಟಿ ನ್ಯಾವಿಗೇಶನ್ ಸಿಸ್ಟಮ್ ಅತ್ಯಾಧುನಿಕ ಉಪಕರಣ ಅಳವಡಿಕೆ

28 Nov 2022 1:37 PM IST
share
ಮಂಗಳ ಆಸ್ಪತ್ರೆಯಲ್ಲಿ ನ್ಯೂರೊ, ಇಎನ್‌ಟಿ ನ್ಯಾವಿಗೇಶನ್ ಸಿಸ್ಟಮ್ ಅತ್ಯಾಧುನಿಕ ಉಪಕರಣ ಅಳವಡಿಕೆ

ಮಂಗಳೂರು: ನರರೋಗ ಮತ್ತು ಕಿವಿ ಮೂಗು ಗಂಟಲು ರೋಗ ಚಿಕಿತ್ಸೆಗಾಗಿ ಅತ್ಯಂತ ಸುಧಾರಿತ ಮೆಡ್ಟ್ರೋನಿಕ್ ಸ್ಪೆಲ್ತ್ ಎಸ್ 8 ನ್ಯೂರೊ ಇಎನ್‌ಟಿ ನ್ಯಾವಿಗೇಶನ್ ಸಿಸ್ಟಮ್ ಉಪಕರಣವನ್ನು ಮಂಗಳೂರಿನ ಮಂಗಳಾ ಆಸ್ಪತ್ರೆ ಮತ್ತು ಮಂಗಳಾ ಕಿಡ್ನಿ ಫೌಂಡೇಶನ್‌ನಲ್ಲಿ ಶನಿವಾರ ಸ್ಥಾಪಿಸಲಾಯಿತು.

ಖ್ಯಾತ ವೈದ್ಯ ಡಾ.ರಾಜ, ಡಾ.ಶಂಕರ್ ಅತ್ಯಾಧುನಿಕ ಉಪಕರಣವನ್ನು ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭ ಮಾತನಾಡಿದ ಮಂಗಳ ಆಸ್ಪತ್ರೆ ಮತ್ತು ಕಿಡ್ನಿ ಫೌಂಡೇಶನ್‌ನ ನಿರ್ದೇಶಕ ಡಾ.ಗಣಪತಿ ಪಿ., ಮಾನವ ದೇಹದ ಮೇಲೆ ಅತ್ಯಂತ ಸವಾಲಿನ ಚಿಕಿತ್ಸೆಗಳಲ್ಲಿ ಮೆದುಳಿನ ಚಿಕಿತ್ಸೆಯು ತುಂಬಾ ಕ್ಷಿಷ್ಟಕರ. ಸುರಕ್ಷಿತ ಮತ್ತು ಸಂಕೀರ್ಣ ಶಸ್ತ್ರಚಿಕಿತ್ಸೆಗೆ ಆಪರೇಟಿಂಗ್ ಮೈಕ್ರೊಸ್ಕೋಪ್, ನ್ಯೂರೊ ಎಂಡೊಸ್ಕೋಪ್ ಮತ್ತಿತರ ಉಪಕರಣಗಳು ಅವಶ್ಯಕ. ಇತ್ತೀಚೆಗೆ ವೈದ್ಯಕೀಯ ಕ್ಷೇತ್ರದಲ್ಲಿ ನ್ಯೂರೊ ಸರ್ಜರಿಯಲ್ಲಿ ಬಳಸಲು ಪ್ರಾರಂಭಿಸಿರುವ ಉಪಕರಣವೇ ನ್ಯೂರೊ ನ್ಯಾವಿಗೇಶನ್ ಸಿಸ್ಟಂ. ಶಸ್ತ್ರಚಿಕಿತ್ಸೆಯಲ್ಲಿ ನಿಖರ ಮಾರ್ಗದರ್ಶನಕ್ಕಾಗಿ ಇದನ್ನು ಬಳಸಲಾಗುತ್ತದೆ. ಅತ್ಯಂತ ಸೂಕ್ಷ್ಮವಾದ ಮೆದುಳಿನ ಭಾಗದ ಕಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಸಣ್ಣ ರಂಧ್ರದ ಮೂಲಕ ಮಾಡಲು ಇವು ಸೂಕ್ತವಾದ ಉಪಕರಣವಾಗಿದೆ ಎಂದರು.

ವಿಶ್ವಾದ್ಯಂತ ಅತ್ಯಂತ ಸುರಕ್ಷಿತ ನ್ಯಾವಿಗೇಶನ್ ಸಿಸ್ಟಂ ಎಂದು ಕರೆಯಲ್ಪಡುವ ‘ದಿ ಮೆಡ್ ಟ್ರೋನಿಕ್ ಸ್ಪೆಲ್ತ್ ಎಸ್ 8’ನ್ನು ಮಂಗಳ ಆಸ್ಪತ್ರೆಯಲ್ಲಿ ಲೋಕಾರ್ಪಣೆಗೊಂಡಂತಾಗಿದೆ. ಮಂಗಳ ಆಸ್ಪತ್ರೆಯು ಈ ವ್ಯವಸ್ಥೆಯನ್ನು ಹೊಂದುತ್ತಿರುವ ದ.ಕ. ಜಿಲ್ಲೆಯ ಮೊದಲ ಆಸ್ಪತ್ರೆಯಾಗಿದೆ ಎಂದು ಗಣಪತಿ ತಿಳಿಸಿದರು.

ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಡಾ.ದೀಪಕ್ ಉಪಕರಣದ ಬಗ್ಗೆ ಮಾಹಿತಿ ನೀಡುತ್ತಾ, ಶಸ್ತ್ರ ಚಿಕಿತ್ಸೆಯ ಮೊದಲೇ ಮೆದುಳಿನ ಒಳಭಾಗದ ಮಾಹಿತಿಯನ್ನು ಈ ಉಪಕರಣದ ಮೂಲಕ ಪಡೆದು ಚಿಕಿತ್ಸೆಯನ್ನು ನಿರ್ಧರಿಸಲಾಗುತ್ತದೆ ಮತ್ತು ಮುಖ್ಯವಾಗಿ ಕೀ ಹೋಲ್ ಮೂಲಕ ಗಡ್ಡೆಯನ್ನು ತೆಗೆಯಲು ಬಹಳ ಉಪ ಯುಕ್ತವಾಗಿದೆ. ರೋಗ ನಿರ್ಣಯಕ್ಕೆ ಬಯಾಪ್ಸಿ ಮೂಲಕ ಮೂಗಿನ ಒಳಗಿನಿಂದ ಪಿಟ್ಯುಟರಿ ಗ್ರಂಥಿಯ ಚಿಕಿತ್ಸೆ, ತಲೆಚಿಪ್ಪಿನ ಒಳಗಿರುವ ಟ್ಯೂಮರ್ ಅಥವಾ ಗಡ್ಡೆಗಳ ಚಿಕಿತ್ಸೆಯಲ್ಲಿ ಅತ್ಯಂತ ಸೂಕ್ತವಾದ ಈ ಉಪಕರಣವನ್ನು ಪ್ರಪಂಚದಾದ್ಯಂತ ಉಪಯೋಗಿಸಲಾಗುತ್ತಿದೆ ಎಂದವರು ಮಾಹಿತಿ ನೀಡಿದರು.

ಡಾ.ಗೌತಮ್ ಮಾಹಿತಿ ನೀಡಿ, ಮೆದುಳು ದ್ರವ ಸೋರಿಕೆ, ಪಿಟ್ಯುಟರಿ ಗಡ್ಡೆಗಳು, ಕಣ್ಣಿನ ಸಾಕೆಟ್‌ಗಳು, ಕಪ್ಪು ಶಿಲೀಂಧ್ರಗಳಂತಹ (ಬ್ಲಾಕ್ ಫಂಗಸ್), ಸೈನಸ್ ಸೋಂಕುಗಳಂತಹ ಹಲವಾರು ರೋಗಗಳನ್ನು ಮೂಗಿನ ಮೂಲಕ ಮಾಡುವ ಚಿಕಿತ್ಸೆಯನ್ನು ಈ ಉಪಕರಣದ ನೆರವಿನಿಂದ ಬಹಳ ಸುಲಭದಲ್ಲಿ ನೆರವೇರಿಸಬಹುದು, ಅಲ್ಲದೆ ‘ಲ್ಯಾಟರಲ್ ಸಲ್ ಬೇಸ್’ ಎಂದು ಕರೆಯಲಾಗುವ ಕಿವಿಯ ಗಡ್ಡೆಗಳನ್ನು ಸುರಕ್ಷಿತವಾಗಿ ಪರಿಹರಿಸಬಹುದು ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಂಗಳ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಗಣಪತಿ ಸಿ., ಆಡಳಿತ ನಿರ್ದೇಶಕಿ ಡಾ.ಅನಿತಾ, ಮಂಗಳಾ ಕಿಡ್ನಿಫೌಂಡೇಶನ್ ನಿರ್ದೇಶಕ ಡಾ.ಮೊಹಿಯುದ್ದೀನ್ ನಪ್ಸೀರ್ ಮತ್ತಿತರರು ಉಪಸ್ಥಿತರಿದ್ದರು.

share
Next Story
X