ʼಐಸಿರಿ 2022ʼ ಅಂತರ್ ಕಾಲೇಜು ಜನಪದ ನೃತ್ಯ ಸ್ಪರ್ಧೆ

ಮಂಗಳೂರು, ನ.28: ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ), ಮಂಗಳೂರು, ಯುಜಿಸಿ ಸ್ಟ್ರೈಡ್ ಸಹಕಾರದೊಂದಿಗೆ ಮಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಪದವಿ ಮತ್ತು ಸಮಾನಾಂತರ ಕೋರ್ಸು ಗಳ ವಿದ್ಯಾರ್ಥಿಗಳಿಗಾಗಿ ʼಐಸಿರಿ 2022ʼ ಎಂಬ ಅಂತರ್ ಕಾಲೇಜು ಜನಪದ ನೃತ್ಯ ಸ್ಪರ್ಧೆ ಇಂದು ನಡೆಯಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಂತಾರ ಮತುತಿ ಒಂದು ಮೊಟ್ಟೆಯ ಕಥೆ ಖ್ಯಾತಿ ಸ್ವರಾಜ್ ಶೆಟ್ಟಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಇದರ ಪ್ರವೀಣ ಖ್ಯಾತಿಯ ರಂಜನ್, ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಕಲರ್ಸ್ ಕನ್ನಡದ ಬಿಗ್ ಬಾಸ್ ಖ್ಯಾತಿಯ ಬಡೆಕ್ಕಿಲ ಪ್ರದೀಪ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಅಲೋಶಿಯಸ್ ಸಂಸ್ಥೆಯ ರೆಕ್ಟರ್ ಫಾದರ್ ಮೆಲ್ವಿನ್ ಪಿಂಟೋ ವಹಿಸಿದ್ದರು. ಪ್ರಾಂಶುಪಾಲರಾದ ರೆ. ಡಾ. ಪ್ರವೀಣ್ ಮಾರ್ಟಿಸ್, ರಿಜಿಸ್ಟ್ರಾರ್ ಮತ್ತು ಪರೀಕ್ಷಾ ನಿಯಂತ್ರಕರಾದ ಡಾ. ಆಲ್ವಿನ್ ಡೇಸಾ, ಸಂಚಾಲಕರಾದ ಸಂಧ್ಯಾ ಯು ಸಿರ್ಸಿಕರ್, ಮತ್ತು ವಿದ್ಯಾರ್ಥಿ ಸಂಚಾಲಕ ಶಶಾಂಕ್ ವೇದಿಕೆಯಲ್ಲಿದ್ದರು.
ಡಾ.ಅಲ್ವಿನ್ ಡಿಎಸ್‌ಎ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳಿಂದ 13 ಕಾಲೇಜು ತಂಡಗಳು ಭಾಗವಹಿಸಿದ್ದವು. ಕರಾವಳಿ ಕರ್ನಾಟಕ ಮತ್ತು ಮಲೆನಾಡು ಪ್ರದೇಶಗಳ ತುಳು, ಕನ್ನಡ, ಕೊಡವ, ಕೊಂಕಣಿ ಮತ್ತು ಬ್ಯಾರಿ ಜನಪದ ನೃತ್ಯ ಪ್ರಕಾರಗಳಿಗೆ ಅವಕಾಶ ನೀಡಲಾಗಿತ್ತು.
ಸುರತ್ಕಲ್ ಗೋವಿಂದದಾಸ ಕಾಲೇಜು ತಂಡ ಪ್ರಥಮ ಸ್ಥಾನ ಗಳಿಸಿದ್ದು, ಮಂಗಳೂರಿನ ಕೆನರಾ ಕಾಲೇಜು ತಂಡ ಪ್ರಥಮ ರನ್ನರ್ ಅಪ್ ಮತ್ತು ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ದ್ವಿತೀಯ ರನ್ನರ್ ಸ್ಥಾನವನ್ನು ಗಳಿಸಿದರು.
ಕವನ ಮತ್ತು ರಕ್ಷಾ ಕಾರ್ಯಕ್ರಮ ನಿರೂಪಿಸಿದರು. ಕಶ್ಯಪ್ ಅತಿಥಿಗಳನ್ನು ಪರಿಚಯಿಸಿದರು. ಸಂಧ್ಯಾ ಯು ಸಿರ್ಸಿಕರ್ ವಂದಿಸಿದರು.