ಫಲಾಹ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ‘ಕಾನೂನು ಮಾಹಿತಿ ಕಾರ್ಯಗಾರ’

ಕೆ.ಸಿ ರೋಡ್: ಫಲಾಹ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ‘ಕಾನೂನು ಮಾಹಿತಿ ಕಾರ್ಯಗಾರ’ ನಡೆಯಿತು.
ಉಳ್ಳಾಲ ಆರಕ್ಷಕ ಠಾಣೆಯ ವೃತ್ತ ನಿರೀಕ್ಷಕ ಸಂದೀಪ್ ಜಿ ಎಸ್ ಕಾರ್ಯಕ್ರಮದಲ್ಲಿ ಮಾಹಿತಿಯನ್ನು ನೀಡಿದರು.
ಫಲಾಹ್ ಎಜುಕೇಶನ್ ಸೊಸೈಟಿ(ರಿ) ಯ ಅಧ್ಯಕ್ಷ ಹಾಜಿ ಯು.ಬಿ.ಮೊಹಮ್ಮದ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಹಾಜಿ ಎನ್ ಅರಬಿ ಕುಂಞಿ, ಕೋಶಾಧಿಕಾರಿ ಹಾಜಿ ಕೆ.ಎಂ ಅಬ್ಬಾಸ್ ಮಜಲ್ , ಸದಸ್ಯ ತಲಪಾಡಿ ಇಸ್ಮಾಯಿಲ್, ಪ್ರಾಂಶುಪಾಲರಾದ ಅಬ್ದುಲ್ ಖಾದರ್ ಹುಸೈನ್ ಪಡುಬಿದ್ರಿ, ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮೊಹಮ್ಮದ್ ರಫೀಕ್, ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಆಯಿಶಾ ಸಬೀನಾ ಕೈಸಿರಾನ್ , ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ವಿದ್ಯಾ ವಿ ಡಿಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕಿ ಪಾತಿಮಾ ಅಸ್ಮೀನಾ ಸ್ವಾಗತಿಸಿದರು. ದಿವ್ಯಾ ಕೆ ವಂದಿಸಿದರು. ಲತಾ ಎಸ್ ಕಾರ್ಯಕ್ರಮ ನಿರೂಪಿಸಿದರು.
Next Story