2023ರ ವಿಶ್ವಕಪ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡ ಅಫ್ಘಾನಿಸ್ತಾನ
ದುಬೈ, ನ.28: ಆತಿಥೇಯ ಶ್ರೀಲಂಕಾ ವಿರುದ್ಧ ಪಲ್ಲೆಕಲೆಯಲ್ಲಿ ನಡೆಯಬೇಕಾಗಿದ್ದ 2ನೇ ಏಕದಿನ ಪಂದ್ಯವು ಮಳೆಯಿಂದಾಗಿ ರದ್ದಾಗಿರುವ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನ ತಂಡ ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.
ಫಲಿತಾಂಶ ದಾಖಲಾಗದ ಕಾರಣ ಅಫ್ಘಾನ್ ತಂಡ ವಿಶ್ವಕಪ್ ಸೂಪರ್ ಲೀಗ್ ಅಂಕಪಟ್ಟಿಯಲ್ಲಿ ಐದು ಹೆಚ್ಚುವರಿ ಅಂಕವನ್ನು ಗಳಿಸಿದ್ದು, ಒಟ್ಟು 115 ಅಂಕ ಕಲೆಹಾಕಿದೆ. ಪ್ರಸಕ್ತ ರ್ಯಾಂಕಿಂಗ್ನಲ್ಲಿ ಅಫ್ಘಾನಿಸ್ತಾನವು ಏಳನೇ ಸ್ಥಾನದಲ್ಲಿದೆ. ಸೂಪರ್ ಲೀಗ್ನ ಅಂತ್ಯಕ್ಕೆ ಅಗ್ರ-8 ತಂಡಗಳು ವಿಶ್ವಕಪ್ಗೆ ನೇರ ಅರ್ಹತೆ ಪಡೆಯುತ್ತವೆ.
ಇದೇ ವೇಳೆ ಶ್ರೀಲಂಕಾ ತಂಡದ ವಿಶ್ವಕಪ್ ನೇರ ಅರ್ಹತೆ ಪಡೆಯುವ ವಿಶ್ವಾಸವು ಅತಂತ್ರ ಸ್ಥಿತಿಯಲ್ಲಿದೆ. ರ್ಯಾಂಕಿಂಗ್ನಲ್ಲಿ ದಸುನ್ ಶನಕ ತಂಡ ಕೇವಲ 67 ಪಾಯಿಂಟ್ಸ್ನೊಂದಿಗೆ 10ನೇ ಸ್ಥಾನದಲ್ಲಿದೆ. ಅಗ್ರ-8ರಲ್ಲಿ ಸ್ಥಾನ ಪಡೆಯಲು ಇನ್ನು ಕೇವಲ 4 ಪಂದ್ಯಗಳನ್ನು ಆಡಲು ಬಾಕಿ ಇದೆ.
Next Story