ಬೆಂಗಳೂರು: ದುಬೈನಿಂದ ಅಕ್ರಮ ‘ಇ-ಸಿಗರೇಟ್’ ಸಾಗಾಟ; ಇಬ್ಬರು ಆರೋಪಿಗಳು ವಶಕ್ಕೆ
ಬೆಂಗಳೂರು, ನ. 28: ದುಬೈನಿಂದ ಅಕ್ರಮವಾಗಿ ಇ-ಸಿಗರೇಟ್ ಸಾಗಿಸುತ್ತಿದ್ದ ಇಬ್ಬರು ಪ್ರಯಾಣಿಕರನ್ನು ಬಂಧಿಸಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು 41 ಲಕ್ಷ ಮೌಲ್ಯದ ಇ-ಸಿಗರೇಟ್ ಜಪ್ತಿ ಮಾಡಿದ್ದಾರೆ.
ನ.25ರಂದು ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಇಬ್ಬರು ಪ್ರಯಾಣಿಕರನ್ನು, ಖಚಿತ ಮಾಹಿತಿಯ ಮೇರೆಗೆ ಅಧಿಕಾರಿಗಳು ತಪಾಸಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಇವರ ವಿರುದ್ಧ ಕಸ್ಟಮ್ಸ್ ಆ್ಯಕ್ಟ್ 1962ರ ಅಡಿ ಪ್ರಕರಣ ದಾಖಲಾಗಿದೆ.
Next Story