ಕಾಂಗ್ರೆಸ್ ನಲ್ಲಿ ಚುನಾವಣೆಗೆ ಮೊದಲೇ 'ಸಿಎಂ ಮ್ಯೂಸಿಕಲ್ ಚೇರ್' ಆರಂಭ: ಬಿಜೆಪಿ ವ್ಯಂಗ್ಯ
ಬೆಂಗಳೂರು,ನ.29: 'ಚುನಾವಣೆಗೆ ಮೊದಲೇ ಕಾಂಗ್ರೆಸ್ ನಲ್ಲಿ ಸಿಎಂ ಮ್ಯೂಸಿಕಲ್ ಚೇರ್ ಆರಂಭಗೊಂಡಿದೆ. ತಮಗೆ ತಾವೇ ಮುಂದಿನ ಮುಖ್ಯಮಂತ್ರಿ ಅಂತ ಸಾರ್ವಜನಿಕವಾಗಿ ಘೋಷಣೆ ಮಾಡಿಕೊಳ್ಳುವ ಮೂಲಕ ಬೀದಿ ಜಗಳಕ್ಕೆ ನಿಂತಿದ್ದಾರೆ. ಕುರ್ಚಿಗಾಗಿ ಕಿತ್ತಾಡುವ ಇವರು ರಾಜ್ಯದ ಚುಕ್ಕಾಣಿ ಹಿಡಿದರೆ ರಾಜ್ಯದ ಗತಿ ಏನಾಗಬಹುದು ಯೋಚಿಸಿ' ಎಂದು ವ್ಯಂಗ್ಯವಾಗಿ ಬಿಜೆಪಿ ಟ್ವೀಟ್ ಮಾಡಿದೆ.
ಚುನಾವಣಾ ಕಾಲದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರೊಳಗಿನ ಕಾದಾಟ ಮತ್ತೆ ತಾರಕಕ್ಕೇರಿದೆ. ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ದಿನನಿತ್ಯ ಬೀದಿಕಾಳಗ ಮಾಡುತ್ತಿದ್ದಾರೆ ಎಂದು ಟ್ವೀಟ್ ಮಾಡಿದೆ.
ಅದೇ ರೀತಿ ಸಿದ್ದರಾಮಯ್ಯರನ್ನು ಹಣಿಯಲೆಂದೇ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿ ಎಂಬ ಹೊಸ ನಿಯಮವನ್ನು ಡಿಕೆಶಿ ಜಾರಿಗೆ ತಂದರು ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಇದನ್ನೂ ಓದಿ: ' ಕಾಶ್ಮೀರ್ ಫೈಲ್ಸ್' ಟೀಕಿಸಿದ ಇಸ್ರೇಲಿ ಚಿತ್ರ ತಯಾರಕನ ವಿರುದ್ಧ ಬಿಜೆಪಿ ಆಕ್ರೋಶ
ಚುನಾವಣೆಗೂ ಮೊದಲೇ @INCKarnataka ನಲ್ಲಿ ಸಿಎಂ ಮ್ಯೂಸಿಕಲ್ ಚೇರ್ ಆರಂಭಗೊಂಡಿದೆ. @DKShivakumar & @siddaramaiah ತಮಗೆ ತಾವೇ ಮುಂದಿನ ಮುಖ್ಯಮಂತ್ರಿ ಅಂತ ಸಾರ್ವಜನಿಕವಾಗಿ ಘೋಷಣೆ ಮಾಡಿಕೊಳ್ಳುವ ಮೂಲಕ ಬೀದಿ ಜಗಳಕ್ಕೆ ನಿಂತಿದ್ದಾರೆ. ಕುರ್ಚಿಗಾಗಿ ಕಿತ್ತಾಡುವ ಇವರು ರಾಜ್ಯದ ಚುಕ್ಕಾಣಿ ಹಿಡಿದರೆ ರಾಜ್ಯದ ಗತಿ ಏನಾಗಬಹುದು ಯೋಚಿಸಿ. pic.twitter.com/S9HLSRITtj
— BJP Karnataka (@BJP4Karnataka) November 29, 2022