ಅಖಿಲ ಭಾರತ ಪ್ರಮುಖ ಬಂದರುಗಳ ಟೇಬಲ್ ಟೆನ್ನಿಸ್- ಕ್ಯಾರಂ ಪಂದ್ಯಾಟ ಉದ್ಘಾಟನೆ

ಮಂಗಳೂರು, ನ. 29: ನವ ಮಂಗಳೂರು ಬಂದರು ಕ್ರೀಡಾ ಸಮಿತಿ ವತಿಯಿಂದ ಆಯೋಜಿಸಲಾಗಿರುವ ಅಖಿಲ ಭಾರತ ಪ್ರಮುಖ ಬಂದರುಗಳ ಟೇಬಲ್ ಟೆನ್ನಿಸ್ ಮತ್ತು ಕ್ಯಾರಂ ಪಂದ್ಯಾಟಕ್ಕೆ ಇಂದು ಚಾಲನೆ ನೀಡಲಾಯಿತು.
ಪಣಂಬೂರಿನ ನವ ಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ಆವರಣದಲ್ಲಿ ಆಯೋಜಿಸಲಾಗಿರುವ ಪಂದ್ಯಾಟವನ್ನು ಪ್ರಮುಖ ಬಂದರು ಕ್ರೀಡಾ ನಿಯಂತ್ರಣ ಮಂಡಳಿಯ ಅಧ್ಯಕ್ಷ ಕೆ.ಜಿ. ನಾಥ್ ಉದ್ಘಾಟಿಸಿದರು. ಎನ್‌ಎಂಪಿಎಯ ಪ್ರಮುಖರಾದ ಪದ್ಮನಾಭಾಚಾರ್ ಉಪಸ್ಥಿತರಿದ್ದರು.
ನವ ಮಂಗಳೂರು ಬಂದರು ಕ್ರೀಡಾ ಮಂಡಳಿಯ ಅಧ್ಯಕ್ಷ ಕ್ಯಾಪ್ಟನ್ ಎಸ್.ಆರ್. ಪಟ್ನಾಯಕ್ ಸ್ವಾಗತಿಸಿದರು.
ಎನ್‌ಎಂಪಿಎ ಸೇರಿದಂತೆ ಎಂಟು ಪ್ರಮುಖ ಬಂದರುಗಳ ಕ್ರೀಡಾಪಟುಗಳು ಪಂದ್ಯಾಟದಲ್ಲಿ ಭಾಗವಹಿಸುತ್ತಿದ್ದಾರೆ. ಮೂರು ದಿನಗಳ ಕಾಲ ನಡೆಯಲಿರುವ ಪಂದ್ಯಾಟದ ಸಮಾರೋಪ ಡಿ. 1ರಂದು ಸಂಜೆ 5.30ಕ್ಕೆ ನಡೆಯಲಿದೆ.