Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ದ್ವೇಷ ಖಂಡಿಸಲ್ಪಟ್ಟಿದೆ: ‘ದಿ ಕಾಶ್ಮೀರ...

ದ್ವೇಷ ಖಂಡಿಸಲ್ಪಟ್ಟಿದೆ: ‘ದಿ ಕಾಶ್ಮೀರ ಫೈಲ್ಸ್ ’ವಿವಾದದ ನಡುವೆ ಬಿಜೆಪಿಯನ್ನು ಕುಟುಕಿದ ಕಾಂಗ್ರೆಸ್

29 Nov 2022 7:48 PM IST
share
ದ್ವೇಷ ಖಂಡಿಸಲ್ಪಟ್ಟಿದೆ: ‘ದಿ ಕಾಶ್ಮೀರ ಫೈಲ್ಸ್ ’ವಿವಾದದ ನಡುವೆ ಬಿಜೆಪಿಯನ್ನು ಕುಟುಕಿದ ಕಾಂಗ್ರೆಸ್

ಹೊಸದಿಲ್ಲಿ,ನ.29: ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್ಎಫ್ಐ)ದಲ್ಲಿ ಇಸ್ರೇಲಿ ನಿರ್ಮಾಪಕ ನದಾವ್ ಲಪಿಡ್(Nadav Lapid) ಅವರು ‘ದಿ ಕಾಶ್ಮೀರ ಫೈಲ್ಸ್’ ('The Kashmir Files')ಚಿತ್ರವನ್ನು ಟೀಕಿಸಿರುವ ಹಿನ್ನೆಲೆಯಲ್ಲಿ ಮಂಗಳವಾರ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ದಾಳಿ ನಡೆಸಿದ ಕಾಂಗ್ರೆಸ್,ಇದು ಮುಜುಗರದ ವಿಷಯವಾಗಿದೆ ಮತ್ತು ದ್ವೇಷವು ಕೊನೆಗೂ ಖಂಡಿಸಲ್ಪಡುತ್ತದೆ ಎಂದು ಹೇಳಿದೆ.

ಗೋವಾದಲ್ಲಿ 53ನೇ ಐಎಫ್ಎಫ್ಐದಲ್ಲಿ ಸೋಮವಾರ ಲಪಿಡ್ ಅವರು,‘ದಿ ಕಾಶ್ಮೀರ ಫೈಲ್ಸ್’ ಚಿತ್ರವನ್ನು ‘ಅಪಪ್ರಚಾರದ ಸರಕು’ ('Commodity of propaganda')ಮತ್ತು ‘ಅಸಭ್ಯ’ ('rude')ಎಂದು ಬಣ್ಣಿಸಿದ್ದರು.

‘‘ಪ್ರಧಾನಿ ನರೇಂದ್ರ ಮೋದಿ(Narendra Modi),ಅವರ ಸರಕಾರ ಮತ್ತು ಬಲಪಂಥೀಯ ವ್ಯವಸ್ಥೆ ಮುತುವರ್ಜಿಯಿಂದ ಪ್ರೋತ್ಸಾಹಿಸಿದ್ದ ‘ದಿ ಕಾಶ್ಮೀರ ಫೈಲ್ಸ್ ’ ಚಿತ್ರ ಐಎಫ್ಎಫ್ಐನಿಂದ ತಿರಸ್ಕರಿಸಲ್ಪಟ್ಟಿದೆ. ಜ್ಯೂರಿಗಳ ಮುಖ್ಯಸ್ಥ ನಡಾವ್ ಲಪಿಡ್ ಅದನ್ನು ಅಪಪ್ರಚಾರದ ಸರಕು,ಅಸಭ್ಯ ಚಿತ್ರವಾಗಿದೆ ಮತ್ತು ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಸೂಕ್ತ ಚಿತ್ರವಲ್ಲ ಎಂದು ಖಂಡಿಸಿದ್ದಾರೆ ’’ ಎಂದು ಟ್ವೀಟಿಸಿರುವ ಕಾಂಗ್ರೆಸ್ನ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥೆ ಮತ್ತು ಪಕ್ಷದ ವಕ್ತಾರರಾಗಿರುವ ಸುಪ್ರಿಯಾ ಶ್ರೀನಾತೆ(Supriya Srinathe) ಅವರು,ಅಂತಿಮವಾಗಿ ದ್ವೇಷವು ಖಂಡಿಸಲ್ಪಡುತ್ತದೆ ಎಂದಿದ್ದಾರೆ.

‘‘ಐಎಫ್ಎಫ್ಐ ಜ್ಯೂರಿಗಳ ಮುಖ್ಯಸ್ಥ ನಡಾವ್ ಲಪಿಡ್ ಅವರು ‘ದಿ ಕಾಶ್ಮೀರ ಫೈಲ್ಸ್’ನ್ನು ಅಸಭ್ಯ,ಅಪಪ್ರಚಾರದ ಸರಕು ಎಂದು ಕರೆದಿದ್ದಾರೆ. ದೇಶದ ಜನರನ್ನು ಧ್ರುವೀಕರಿಸುವ ಪ್ರಯತ್ನದಲ್ಲಿ ಬಿಜೆಪಿ ಸರಕಾರವು ಚಿತ್ರಕ್ಕೆ ಹೆಚ್ಚಿನ ಉತ್ತೇಜನ ನೀಡಿತ್ತು, ಫಲಿತಾಂಶವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಭಾರೀ ಮುಖಭಂಗವುಂಟಾಗಿದೆ ’’ಎಂದು ಕಾಂಗ್ರೆಸ್ ನ ಇನ್ನೋರ್ವ ವಕ್ತಾರರಾದ ಶಮಾ ಮುಹಮ್ಮದ್(Shama Muhammad) ಟ್ವೀಟಿಸಿದ್ದಾರೆ.

ಐಎಫ್ಎಫ್ಐ 2022ರ ಸಮಾರೋಪ ಸಮಾರಂಭದಲ್ಲಿ ತನ್ನ ಭಾಷಣದಲ್ಲಿ ಲಪಿಡ್,‘‘ಚಲನಚಿತ್ರೋತ್ಸವದಲ್ಲಿ ‘ದಿ ಕಾಶ್ಮೀರ ಫೈಲ್ಸ್ ’ ಚಿತ್ರವು ಪ್ರದರ್ಶನಗೊಂಡಿದ್ದು ನಮ್ಮನ್ನು ವಿಚಲಿತರನ್ನಾಗಿಸಿದೆ,ನಮಗೆ ಆಘಾತವನ್ನುಂಟು ಮಾಡಿದೆ. ಅದು ಅಪಪ್ರಚಾರದ ಸರಕು ಮತ್ತು ಅಸಭ್ಯ ಚಿತ್ರವಾಗಿ ನಮಗೆ ಭಾಸವಾಗಿದ್ದು,ಇಂತಹ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ ಮತ್ತು ಸ್ಪರ್ಧಾತ್ಮಕ ವಿಭಾಗಕ್ಕೆ ಸೂಕ್ತ ಚಿತ್ರವಾಗಿರಲಿಲ್ಲ’’ ಎಂದು ಹೇಳಿದ್ದರು.

‘ ಈ ಅಭಿಪ್ರಾಯವನ್ನು ಬಹಿರಂಗವಾಗಿ ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಹಿಂಜರಿಕೆಯಿಲ್ಲ,ಏಕೆಂದರೆ ಕಲೆ ಮತ್ತು ಜೀವನಕ್ಕೆ ಅಗತ್ಯವಾದ ವಿಮರ್ಶಾತ್ಮಕ ಚರ್ಚೆಯನ್ನು ಈ ವೇದಿಕೆಯು ಖಂಡಿತವಾಗಿಯೂ ಸ್ವೀಕರಿಸುತ್ತದೆ ’ಎಂದೂ ಲಪಿಡ್(lipid) ಹೇಳಿದ್ದರು.

ಲಪಿಡ್ ಹೇಳಿಕೆಗಾಗಿ ಅವರನ್ನು ಟೀಕಿಸಿರುವ ಭಾರತದಲ್ಲಿ ಇಸ್ರೇಲ್ ರಾಯಭಾರಿ ನವೋರ್ ಗಿಲೊನಿ,ಚಲನಚಿತ್ರೋತ್ಸವದಲ್ಲಿ ಜ್ಯೂರಿಗಳ ಮುಖ್ಯಸ್ಥರಾಗಿ ಭಾರತದ ಆಹ್ವಾನವನ್ನು ಕೆಟ್ಟ ರೀತಿಯಲ್ಲಿ ದುರುಪಯೋಗಿಸಿಕೊಂಡಿದ್ದಕ್ಕಾಗಿ ಲಪಿಡ್ ಅವರಿಗೆ ನಾಚಿಕೆಯಾಗಬೇಕು ಎಂದು ಹೇಳಿದ್ದಾರೆ. ಮಾ.11ರಂದು ಬಿಡುಗಡೆಗೊಂಡಿದ್ದ ‘ದಿ ಕಾಶ್ಮೀರ ಫೈಲ್ಸ್ ’ಐಎಫ್ಎಫ್ಐನ ಭಾರತೀಯ ಪನೋರಮಾ ವಿಭಾಗದಲ್ಲಿದ್ದು,ನ.22ರಂದು ಪ್ರದರ್ಶನಗೊಂಡಿತ್ತು.

share
Next Story
X